ಉನ್ನತ ವಿದ್ವತ್ಪೂರ್ಣ ಸಾಧನೆಯೊಂದಿಗೆ ಸೇವೆ

Mul_Bappanadu
Published on

ಮೂಲ್ಕಿ: ಉನ್ನತ ವಿದ್ವತ್ಪೂರ್ಣ ಸಾಧನೆಯೊಂದಿಗೆ ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ನೀಡುವ ಮೂಲಕ ಯುವ ಸವಾಜಕ್ಕೆ ವಾದರಿಯಾಗಿ ಬೆಳೆದಿರುವ ನಾಗೇಶ್ ಬಪ್ಪನಾಡು ಸಾಧನೆ ಅಭಿನಂದನೀಯ ಎಂದು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಹೇಳಿದರು.

ಆಕಾಶವಾಣಿಯ ಅತ್ಯುನ್ನತ ಶ್ರೇಣಿಯ ಗೌರವಕ್ಕೆ ಪಾತ್ರರಾದ ನಾಗಸ್ವರ ವಾದಕ ವಿದ್ವಾನ್ ನಾಗೇಶ್ ಬಪ್ಪನಾಡು ಅವರನ್ನು ಕೊಲಕಾಡಿ ಪದ್ಮಶ್ರೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಗೌರವಿಸಿ ಮಾತನಾಡಿದರು.

ಕೊಲಕಾಡಿ ಪದ್ಮಶ್ರೀ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ವಾದಿರಾಜ ಉಪಾಧ್ಯಾಯ ಕೊಲಕಾಡಿ ಶುಭಹಾರೈಸಿದರು. ವಿದ್ವಾನ್ ನಾಗೇಶ್ ಬಪ್ಪನಾಡು ಪತ್ನಿ ಶ್ರೀಲತಾ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಸಂಸ್ಕೃತ ವಿದ್ವಾಂಸ ಅಚ್ಯುತ ರಾವ್ ಪಾವಂಜೆ, ಸುರತ್ಕಲ್ ಮಣಿಕೃಷ್ಣ ಅಕಾಡೆಮಿಯ ನಿತ್ಯಾನಂದ ರಾವ್, ಶ್ರೀಕಾಂತ್ ಭಟ್ ಕೊಲಕಾಡಿ, ರಂಗಕರ್ಮಿ ಚಂದ್ರಶೇಖರ ಸುವರ್ಣ, ಗುರುಪ್ರಸಾದ್, ಟ್ರಸ್ಟ್‌ನ ಶಶಿಕಲಾ ಉಪಾಧ್ಯಾಯ, ಡಾ.ಶ್ರೀವತ್ಸ ಉಪಾಧ್ಯಾಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net