ಸೇವೆ ಕಾಯಂಗೊಳಿಸಲು ಒತ್ತಾಯ

13-Athni-1-web
ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ಅಥಣಿ ತಾಲೂಕಿನ ಅತಿಥಿ ಉಪನ್ಯಾಸಕರು ಶುಕ್ರವಾರ ಉಪತಹಸೀಲ್ದಾರ್ ರಾಜು ಬುರ್ಲಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಡಾ. ಮಹಾಂತೇಶ ಉಕ್ಕಲಿ, ಎನ್.ಬಿ. ಗಂಗನವರ, ಎಸ್.ಎಸ್. ದೇವರೆಡ್ಡಿ, ಅಕ್ಷತಾ ಬಿಜಾಪುರ ಭಾಗ್ಯಶ್ರೀ ಸಂಖ, ಅಕ್ಷತಾ ಮಮದಾಪುರ, ಎಸ್.ಎಸ್.ಪಾಟೀಲ ಇತರರು ಇದ್ದರು.
Published on

ಅಥಣಿ: ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಹಾಗೂ ಕಾಯಂ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಉಪತಹಸೀಲ್ದಾರ್ ರಾಜು ಬುರ್ಲಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ರಾಜ್ಯದ ಪ್ರಥಮ ದರ್ಜೆ ಕಾಲೇಜ್‌ಗಳಲ್ಲಿ ಹತ್ತು-ಇಪ್ಪತ್ತು ವರ್ಷಗಳಿಂದ ಕಡಿಮೆ ಗೌರವಧನ ಪಡೆದು ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನಮಗೆ ಸರ್ಕಾರ ನ್ಯಾಯಯುತ ಬೇಡಿಕೆಗಳಾದ ಸೇವೆ ಕಾಯಂಗೊಳಿಸುವುದು, ಕನಿಷ್ಠ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ನಮ್ಮ ಬೇಡಿಕೆಗಳನ್ನು ಈಡೆರಿಸಬೇಕು ಎಂದು ಒತ್ತಾಯಿಸಿ ಅಥಣಿ ಸರ್ಕಾರಿ ಪ್ರಥಮ ದರ್ಜೆ ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಈವರೆಗೆ ಸೇವಾ ಭದ್ರತೆ ಹಾಗೂ ಕಾಯಂ ಕುರಿತು ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ಶೀಘ್ರ ಅತಿಥಿ ಉಪನ್ಯಾಸಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಡಾ. ಮಹಾಂತೇಶ ಉಕ್ಕಲಿ, ಆರ್.ಎ. ಬಡಿಗೇರ, ಎನ್.ಬಿ. ಗಂಗಣ್ಣವರ, ಎಸ್.ಎಸ್. ದೇವರೆಡ್ಡಿ, ಎಂ.ಬಿ. ಸಲಗರೆ, ಬಿ.ಎಸ್.ಪಾಟೀಲ, ಎಸ್.ಎಂ. ತಕತರಾವ, ಅಕ್ಷತಾ ಬಿಜಾಪುರ, ಭಾಗ್ಯಶ್ರೀ ಸಂಖ, ಅಕ್ಷತಾ ಮಮದಾಪುರ, ಎಸ್.ಎಸ್.ಪಾಟೀಲ, ಆರ್.ಎಸ್. ಹಳ್ಳೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net