

ಬೆಳಗಾವಿ: ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಬೆಳೆಯಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿಯೇ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಜಾರವಾಡಿ ಗ್ರಾಪಂ ಅಧ್ಯಕ್ಷ ಸಾಗರ ಪಾಟೀಲ ಸಲಹೆ ನೀಡಿದರು.
ತಾಲೂಕಿನ ಜಾರವಾಡಿ ಗ್ರಾಮದಲ್ಲಿ ಕೆಎಲ್‌ಇ ಸಂಸ್ಥೆಯ ಜಿಎ ಪದವಿ ಪೂರ್ವ ಕಾಲೇಜ್ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಎನ್‌ಎಸ್‌ಎಸ್ ಶಿಬಿರದಲ್ಲಿ ರೂಢಿಸಿಕೊಂಡ ಶಿಸ್ತುಬದ್ಧ ಜೀವನ ಶೈಲಿ, ರಾಷ್ಟ್ರೀಯ ಮನೋಭಾವನೆ, ಶ್ರಮದಾನದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಗುರಿ ಸಾಧನೆ ಕಡೆ ಸಾಗಬೇಕು ಎಂದರು.
ಕೆಎಲ್‌ಇ ಕಾಲೇಜು ಪ್ರಾಚಾರ್ಯ ಆರ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ತಾನಾಜಿ ಪಾಟೀಲ, ಮರಾಠಿ ಶಾಲೆಯ ಮುಖ್ಯ ಶಿಕ್ಷಕಿ ಪಿ.ಬಿ. ಹಾಲೆನ್ನವರ, ಟಿ.ಪಿ.ಬಾನಕರೆ, ಡಿ.ಎಸ್. ಪವಾರ, ಎಸ್.ಆರ್. ಗುಮ್ಮಗೋಳ, ಉಪನ್ಯಾಸಕ ವಿನಾಯಕ ನೀರಲಕಟ್ಟಿ, ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಇತರರಿದ್ದರು.