ಮೈಲುಗಲ್ಲು ಸೃಷ್ಟಿಸುವ ಯೋಜನೆ ಜಾರಿ

1003 KLB 04
Published on

ಕಲಬುರಗಿ: ಲಕ್ಷ ಉದ್ಯೋಗ ಸೃಷ್ಟಿಸುವ ಟೆಕ್​ಸ್ಟೈಲ್​ ಪಾರ್ಕ್, ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಂಗಳೂರಿಗೆ ನೇರ ರೈಲು, ನಮ್ಮ ಭಾಗದ ಉದ್ಯಮ, ಸಾರಿಗೆಗೆ ಬಹುದೊಡ್ಡ ಕೊಡುಗೆ ನೀಡಲಿರುವ ಚೈನೈ-ಸೂರತ್ ಭಾರತ್ ಮಾಲಾ ರೈಲು ಸೇರಿ ಜಿಲ್ಲೆಯಲ್ಲಿ ಏಳು ದಶಕದಲ್ಲಿ ಆಗದ ಮೈಲಿಗಲ್ಲು ಸೃಷ್ಟಿಸುವ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಸರ್ಕಾರದಿಂದ ಆಗಿವೆ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.

ನಗರದ ಬಿಲಗುಂದಿ ವೃತ್ತದ ಬಳಿ ರಿಂಗ್ ರಸ್ತೆ ಬದಿ ೫೭ ಕೋಟಿ ರೂ. ವೆಚ್ಚದಲ್ಲಿ ಸೇವಾ ರಸ್ತೆ (ರಾಮಮಂದಿರ, ಬಿಲಗುಂದಿ ಕ್ರಾಸ್, ಹಾಗರಗಾ ಕ್ರಾಸ್, ಹುಮನಾಬಾದ್ ಕ್ರಾಸ್) ನಿರ್ಮಾಣಕ್ಕೆ ಭಾನುವಾರ ಅಡಿಗಲ್ಲು ನೆರವೇರಿಸಿ ಮಾತನಾಡಿ, ಕಲಬುರಗಿಯಿಂದ ವಂದೇ ಭಾರತ್ ರೈಲು ಉದ್ಘಾಟನೆಯಾಗುತ್ತಿದೆ ಎಂದು ಹೇಳಿದರು.

ಈ ಭಾಗದಿಂದ ಆಯ್ಕೆಯಾಗಿ ೬೫ ವರ್ಷದ ಆಡಳಿತ ನಡೆಸಿದವರು ಎಲ್ಲ ಅಧಿಕಾರ ಅನುಭವಿಸಿದರು. ಆದರೆ ಇಡೀ ದೇಶದಲ್ಲಿ ಕಲಬುರಗಿ ಜಿಲ್ಲೆಯ ತಲಾ ಆದಾಯ ಅತ್ಯಂತ ಕಡಿಮೆಯಾಗಿದ್ದು, ಕಾಂಗ್ರೆಸ್‌ನವರ ಆಡಳಿತ ಶೈಲಿಗೆ ಸಾಕ್ಷಿ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್ ಮಾತನಾಡಿ, ಸರ್ವಿಸ್ ರಸ್ತೆ ಹೆಸಗಷ್ಟೇ ಇತ್ತು. ಓಡಾಟಕ್ಕೆ ಆಗುತ್ತಿರಲಿಲ್ಲ. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ನಿರಂತರ ಧ್ವನಿ ಎತ್ತಿ, ಪ್ರಬಲವಾಗಿ ಬೇಡಿಕೆ ಇಟ್ಟಿದ್ದೆ ಎಂದರು.

ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ಎಲ್ಲ ಕಡೆ ರಿಂಗ್ ರಸ್ತೆಗಿಂತ ಮೊದಲು ಸರ್ವಿಸ್ ರಸ್ತೆ ಮಾಡುತ್ತಾರೆ. ಇಲ್ಲಿ ಮಾಡಲಿಲ್ಲ. ಹಾಗರಗಾ ಕ್ರಾಸ್‌ನಿಂದ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದು, ತೆರವು ಮಾಡಲು ಹೋದರೆ ಮುಖಂಡರೇ ವಿರೋಧಿಸಿದ್ದರು. ಇದೀಗ ಬಗೆಹರಿದಿದೆ ಎಂದರು.
ಪಾಲಿಕೆ ಸದಸ್ಯ ಶಾಂತಾಬಾಯಿ ಹಾಲ್ಮಠ ಮಾತನಾಡಿ, ಜಾಗೃತಿ ಕಾಲನಿ, ಓಂನಗರ ಸೇರಿ ಈ ಭಾಗದ ಎಲ್ಲ ಕಾಲನಿಗಳ ಜನರಿಗೆ ನಿತ್ಯ ತಾಪತ್ರೆಯ ಬಗೆಹರಿದಿದೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್, ಮೇಯರ್ ವಿಶಾಲ ದರ್ಗಿ, ಕೃಷ್ಣಾ ರೆಡ್ಡಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದೆÃವಾಡಗಿ, ಜಗದೇವ ಗುತ್ತೇದಾರ್, ದಿಗಂಬರ, ಬಸವರಾಜ, ಉಮೇಶ ಪಾಟೀಲ್, ಸುನೀಲ ಬನಶೆಟ್ಟಿ, ಬಸವರಾಜ ಮುನ್ನಳ್ಳಿ, ರವಿ ಕೊರವಿ, ರಾಜಶೇಖರ ಮಾಗಾ, ವರದಾಶಂಕರ ಶೆಟ್ಟಿ, ವೈಜನಾಥ ಕಳಸ್ಕರ್, ದತ್ತನಗೌಡ, ರಾಜಶೇಖರ ಮಹಾಗಾಂವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net