

ದೇವದುರ್ಗ: ಜಾನಪದ ಕ್ಷೇತ್ರಕ್ಕೆ ರುದ್ರಾಕ್ಷಿ ಕುಟುಂಬದ ಕೊಡುಗೆ ಅಪಾರವಾಗಿದೆ ಎಂದು ಶ್ರೀ ಕುಮಾರೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಶಾಂತಿನಗರದಲ್ಲಿ ದೇವದುರ್ಗ ಹಗಲುವೇಷ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ಶಿವಶರಣೆ ಶರಣಮ್ಮ, ರಾಮಣ್ಣ ರುದ್ರಾಕ್ಷಿ ಅವರ 17ನೇ ವಷರ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಇದನ್ನು ಓದಿ: ಅಬ್ರಹಾಂ, ಚಂದ್ರಶೇಖರ್ಗೆ ನಾಟಕ ಅಕಾಡೆಮಿ ಪ್ರಶಸ್ತಿ
ಶಿವಶರಣೆ ಶರಣಮ್ಮ, ರಾಮಣ್ಣ ರುದ್ರಾಕ್ಷಿ ಅವರ ಸೇವೆ ಗುರುತಿಸಿ ರಾಜ್ಯ ಸರ್ಕಾರ ಎರಡು ದಶಕಗಳ ಹಿಂದೆ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ತಾಲೂಕಿನಲ್ಲಿ ಕಲೆ, ಸಾಹಿತ್ಯ, ಸಂಗೀತ, ಹಗಲುವೇಷ, ಬಯಲಾಟ ಕಲೆ ನೂರಾರು ವಷರ್ಗಳಿಂದ ಬೆಳೆದುಬಂದಿದೆ ಎಂದರು.
ಶಿವಶರಣೆ ಶರಣಮ್ಮ, ರಾಮಣ್ಣ ರುದ್ರಾಕ್ಷಿ ಅವರ 17ನೇ ವಷರ್ದ ಪುಣ್ಯಸ್ಮರಣೆ ಸ್ಮರಣಾರ್ಥ ಕಸಾಪ ದತ್ತಿ ನಿಧಿಗೆ 25ಸಾವಿರ ದೇಣಿಗೆ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ಅಲೆಮಾರಿ ಬುಡಕಟ್ಟು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.