ಸೇವೆ ಕಾಯಂಗೆ ಒತ್ತಾಯಿಸಿ ಹೂವಿನಹಡಗಲಿಯಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಕೃಷಿ ಅನುವುಗಾರರು

090620 Hadagali Agriculture Supporters Appeal
Published on

ಹೂವಿನಹಡಗಲಿ: ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತ ಅನುವುಗಾರರ ಸಂಘ, ಶ್ರಮ ಜೀವಿಗಳ ವೇದಿಕೆ ಮಂಗಳವಾರ ಗೇಡ್ 2 ತಹಸೀಲ್ದಾರ್ ಪ್ರಭಾಕರಗೌಡಗೆ ಮನವಿ ಸಲ್ಲಿಸಿತು.

ಸರ್ಕಾರದ ಎಲ್ಲ ಯೋಜನೆಗಳನ್ನು ಅನುಷ್ಠಾನ ಮಾಡುತ್ತಾ ಕೃಷಿ ಇಲಾಖೆ ಕೆಲಸಗಳನ್ನೂ ನಿರ್ವಹಿಸುತ್ತಿದ್ದೇವೆ. ಆದರೆ ಕಳೆದ 12 ವರ್ಷಗಳಿಂದ ಸರ್ಕಾರ ನೀಡುವ ಅಲ್ಪಸ್ವಲ್ಪ ಗೌರವಧನಲ್ಲೇ ಜೀವನ ನಡೆಸುತ್ತಿದ್ದೇವೆ. ಆದ್ದರಿಂದ ಕುಟುಂಬಗಳ ನಿರ್ವಹಣೆಗೆ ಮಾಸಿಕ 10 ಸಾವಿರ ರೂ. ವೇತನ ನೀಡಬೇಕು. ಅನುವುಗಾರರನ್ನು ಮುಂದುವರಿಸಬೇಕು. ಕಾಯಂ ನೌಕರರೆಂದು ಪರಿಗಣಿಸಿ ಸೂಕ್ತ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು. ಅನುವುಗಾರರ ಸಂಘದ ತಾಲೂಕು ಅಧ್ಯಕ್ಷ ಶಂಭುಲಿಂಗಪ್ಪ, ಕಾರ್ಯದರ್ಶಿ ಚೌಡಪ್ಪ, ಅನುವುಗಾರರಾದ ಇಬ್ರಾಹಿಂ, ಎಚ್.ಎಂ.ವೀರಯ್ಯ, ಬಸವರಾಜ, ಎಂ. ಮಹಾಂತೇಶ, ಕೋಟೆಪ್ಪ, ಸಿದ್ದನಗೌಡ, ನಾಗಪ್ಪ, ಗುಂಡಿ ಚೇತನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net