ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ಸಂಗ್ರಹ

xr:d:DAFrCSyoYmU:392,j:511583302687332668,t:24041313
ಬಣವಿಕಲ್ಲು ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶನಿವಾರ ಸುರಿದ ಮಳೆಗೆ ಸರ್ವೀಸ್ ರಸ್ತೆಯಲ್ಲಿ ನೀರು ಸಂಗ್ರಹವಾಗಿತ್ತು.
Published on

ಕಾನಹೊಸಹಳ್ಳಿ: ಕಾನಹೊಸಹಳ್ಳಿ, ಗುಡೇಕೋಟೆ ಎರಡು ಹೋಬಳಿಯ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಮಳೆಯಾಗಿದೆ.

ಬೇಸಿಗೆ ಬಿಸಿಲಿನಿಂದ ಕುಡಿವ ನೀರಿನ ಕೊರತೆಯಾಗಿ ಜನರು ಮತ್ತು ಜಾನುವಾರು ತತ್ತರಿಸಿದ್ದವು. ವರ್ಷದ ಮೊದಲ ಮಳೆ ತುಸು ಸಂತಸಕ್ಕೆ ಕಾರಣವಾಗಿದೆ. ಅಲ್ಲದೆ, ತಾಪಮಾನವೂ ತಂಪಾಗಿದೆ. ಗುಡೇಕೋಟೆ ಹೋಬಳಿಯ ಭೀಮಸಮುದ್ರ, ಕರಡಿಹಳ್ಳಿ, ಚಿಕ್ಕಜೋಗಿಹಳ್ಳಿ, ಕಡಾಕೊಳ್ಳ ಸೇರಿ ಹತ್ತಾರು ಹಳ್ಳಿಗಳಲ್ಲಿ ಉತ್ತಮ ಮಳೆಯಾದರೆ, ಕಾನಹೊಸಹಳ್ಳಿ ಹೋಬಳಿಯ ಹುಲಿಕೆರೆ, ಕಾನಾಮಡುಗು, ಆಲೂರು, ಬಯಲುತುಂಬರಗುದ್ದಿ, ರಂಗನಾಥಹಳ್ಳಿ, ಸೂರವ್ವನಹಳ್ಳಿ ಸೇರಿ 15ಹೆಚ್ಚು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ.

ಬಣವಿಕಲ್ಲು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net