ಸೇವೆ ಮಾಡಲು ಅವಕಾಶ ನೀಡಿ

mangala angadi
Published on

ಘಟಪ್ರಭಾ: ದಿ. ಸುರೇಶ ಅಂಗಡಿಯವರು ಬೆಳಗಾವಿ ಲೋಕ ಸಭಾ ವ್ಯಾಪ್ತಿಯಲ್ಲಿ ಅನೇಕ ಜನಪ್ರಿಯ ಕಾರ್ಯ ಮಾಡಿದ್ದಾರೆ.
ಅವರ ಅಭಿವೃದ್ಧಿ ಕಾರ್ಯ ಮುಂದುವರಿಯಲು ಮತದಾರರು ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಯವರಿಗೆ ಮತ ನೀಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮನವಿ ಮಾಡಿದರು. ಶನಿವಾರ ಸಮೀಪದ ಮುಗಳಖೋಡ ಮಠದಲ್ಲಿ ನೆರದಿದ್ದ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಮಂಗಲ ಅಂಗಡಿ ಮಾತನಾಡಿ, ನಾನು ಗೋಕಾಕದ ಮನೆ ಮಗಳು ನಿಮ್ಮ ಮನೆಗೆ ಬಂದಿದ್ದೇನೆ. ದಯವಿಟ್ಟು ಸುರೇಶ ಅಂಗಡಿಯವರಿಗೆ ನೀಡಿದ ಸಹಕಾರ ನೀಡಿ ತಮ್ಮ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಕೋರಿದರು. ಮಗಳು ಶ್ರದ್ಧಾ ಅಂಗಡಿ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮಾಜಿ ಶಾಸಕ ಎಂ.ಎಲ್.ಮುತ್ತೆಣ್ಣವರ, ಘಟಪ್ರಭಾ ಪಪಂ ಅಧ್ಯಕ್ಷ ಮಾಲನ ದಳವಾಯಿ, ಪ್ರೇಮಾ ಭಂಡಾರಿ ಸೇರಿದಂತೆ ಅನೇಕ ಸ್ಥಳೀಯ ಬಿಜೆಪಿ ನಾಯಕರು ಸಾಥ್ ನೀಡಿದ್ದರು. ಇದಕ್ಕೂ ಮುಂಚೆ ಶಿಂಧಿಕುರಬೇಟ ಗ್ರಾಮದಲ್ಲಿ ಮತಯಾಚನೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net