ಮೋದಿ, ಗಾಂಧೀಜಿ, ಉಪಾಧ್ಯಾಯ ಜನ್ಮದಿನ ಹಿನ್ನೆಲೆಯಲ್ಲಿ ಕೆ.ಆರ್.ಪುರ ಕ್ಷೇತ್ರದಲ್ಲಿ ಸೇವಾ ಪಾಕ್ಷಿಕ ಕಾರ್ಯಕ್ರಮ

krpura
Published on

ಕೆ.ಆರ್.ಪುರ : ಪ್ರಧಾನಿ ನರೇಂದ್ರ ಮೋದಿ, ಮಹಾತ್ಮ ಗಾಂಧಿಜೀ ಹಾಗೂ ದೀನದಯಾಳ್ ಉಪಾಧ್ಯಾಯರ ಜನ್ಮದಿನದ ಪ್ರಯುಕ್ತ ಬುಧವಾರದಿಂದ (ಸೆ.17) ಅ.2ರವರೆಗೆ ಕೆ.ಆರ್.ಪುರ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಸೇವಾ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬೈರತಿ ಬಸವರಾಜ ತಿಳಿಸಿದ್ದಾರೆ.

ಬೈರತಿ ಗ್ರಾಮದ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ದೇಶದ ನೆಚ್ಚಿದ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ಹುಟ್ಟು ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಬಿಜೆಪಿ ಪಕ್ಷದ ವತಿಯಿಂದ ಸೇವಾ ಪಾಕ್ಷಿಕ ಅಭಿಯಾನ ಹಮ್ಮಿಕೊಂಡಿದ್ದು, ಇದರಿಂದ ಸಾಕಷ್ಟು ಬಡ ಜನರಿಗೆ ಸಹಕಾರವಾಗುತ್ತದೆ. ಕೆ.ಆರ್.ಪುರ ಕ್ಷೇತ್ರದ ಎಲ್ಲಾ ಶಕ್ತಿ ಕೇಂದ್ರಗಳು, ವಾರ್ಡ್‌ಗಳಲ್ಲಿ 15 ದಿನಗಳ ಕಾಲ ಸೇವಾ ಪಾಕ್ಷಿಕ ಕಾರ್ಯಕ್ರಮ ಸಂಯೋಜಿಸಲಾಗಿದ್ದು, ಬುಧವಾರ ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಬ್ರೆಡ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಲಾಗುವುದು. ಗೋಪೂಜೆ, ಪೌರಕಾರ್ಮಿಕರಿಗೆ ಸಮವಸ್ತ್ರ ಹಾಗೂ ದಿನಸಿ ಕಿಟ್ ವಿತರಣೆ, ಅನಾಥಾಶ್ರಮಗಳಿಗೆ ಸಮವಸ್ತ್ರ, ಆರೋಗ್ಯ ಶಿಬಿರ, ಸಸಿ ನೆಡುವುದು ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳ ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳಲಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಬೈರತಿ ಬಸವರಾಜ್ ಕರೆ ನೀಡಿದ್ದಾರೆ.

ಸಭೆಯಲ್ಲಿ ಬೆಂ.ಉತ್ತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾನುರಂಗಸ್ವಾಮಿ, ಕೆ.ಆರ್.ಪುರ ಮಂಡಲ ಅಧ್ಯಕ್ಷ ಎಂ.ಮುನೇಗೌಡ, ಸ್ಥಳೀಯ ಮುಖಂಡರಾದ ನಾಗೇನಹಳ್ಳಿ ಲೋಕೇಶ್, ಎಸ್.ರಮೇಶ್, ಗೀತಾ ವಿವೇಕಾನಂದ, ಪಿ.ಗೌರಮ್ಮ ರಾಜಣ್ಣ, ಅಂತೋಣಿಸ್ವಾಮಿ, ಎಸ್.ಜಿ.ನಾಗರಾಜ್, ಸಿದ್ದಲಿಂಗಯ್ಯ, ಶ್ರೀಕಾಂತ್,ಶಿವರಾಜ್, ಹೊರಮಾವು ರಾಮಚಂದ್ರ, ಗಂಗಾಧರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net