

ಕಡಬ: ಸವಣೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಮರ್ಪಕ ಸೇವೆಗೆ ಆಗ್ರಹಿಸಿ ಶಾಖೆಯ ಮುಂಭಾಗ ಗ್ರಾಹಕರಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಮಾತನಾಡಿ, ಕೆಲ ವರ್ಷಗಳಿಂದ ಬ್ಯಾಂಕ್ನ ಸೇವೆಯಲ್ಲಿ ನ್ಯೂನ್ಯತೆ ಇದೆ. ಸರಿಪಡಿಸುವಂತೆ ಹಲವು ಬಾರಿ ಕೇಳಿಕೊಂಡರೂ ಸುಧಾರಣೆಯಾಗಿಲ್ಲ. ಇದು ಬ್ಯಾಂಕ್ ವಿರುದ್ಧ ಅಥವಾ ಅಧಿಕಾರಿಗಳ ವಿರುದ್ಧ ಪ್ರತಿಭಟನೆಯಲ್ಲ. ಸಮಸ್ಯೆ ಪರಿಹಾರವಾಗಬೇಕೆಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಸವಣೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಹಲವರು ಇಲ್ಲಿ ವ್ಯವಹಾರ ನಿಲ್ಲಿಸಿ ಇತರ ಬ್ಯಾಂಕ್ಗಳಲ್ಲಿ ವ್ಯವಹರಿಸುತ್ತಿದ್ದಾರೆ ಎಂದರು.
ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ ಸುಲಾಯ, ಗ್ರಾ.ಪಂ. ಸದಸ್ಯ ಎಂ.ಎ.ರಫೀಕ್, ವಕೀಲ ಮಹೇಶ್ ಕೆ.ಸವಣೂರು, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಮಾತನಾಡಿದರು.
ಸವಣೂರು ಗ್ರಾ.ಪಂ. ಸದಸ್ಯರಾದ ರಾಜೀವಿ ಶೆಟ್ಟಿ, ತೀರ್ಥರಾಮ ಕೆಡೆಂಜಿ, ಅಬ್ದುಲ್ ರಝಾಕ್, ಬಾಬು ಎನ್, ಚಂದ್ರಾವತಿ ಸುಣ್ಣಾಜೆ, ತಾರಾನಾಥ ಬೊಳಿಯಾಲ, ಭರತ್ ರೈ ಕಲಾಯಿ, ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯ ಸತೀಶ್ ಬಲ್ಯಾಯ, ಸವಣೂರು ಸಿಎ ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್, ನಿರ್ದೇಶಕರಾದ ಗಂಗಾಧರ ಪೆರಿಯಡ್ಕ, ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಅಬ್ದುಲ್ ಕರೀಂ ಎಸ್.ಆರ್, ಅಶ್ರಫ್ ಜನತಾ, ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ, ಕಾರ್ಯದರ್ಶಿ ಕೀರ್ತನ್ ಕೋಡಿಬೈಲು ಮೊದಲಾದವರಿದ್ದರು. ರಾಜೇಶ್ ಇಡ್ಯಾಡಿ ವಂದಿಸಿದರು.
ಬೃಹತ್ ಹೋರಾಟದ ಎಚ್ಚರಿಕೆ
ಸಚಿನ್ ಭಂಡಾರಿ ಮನವಿ ಪತ್ರ ವಾಚಿಸಿದರು. ಬಳಿಕ ಬ್ಯಾಂಕ್ ಅಧಿಕಾರಿಗಳು ಪ್ರತಿಭಟನಾ ನಿರತರೊಂದಿಗೆ ಮಾತನಾಡಿ ಸಮಸ್ಯೆ ಸರಿಪಡಿಸುವ ಕುರಿತು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. 15 ದಿನಗಳೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ ಬೃಹತ್ ಹೋರಾಟ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದರು.