ಸೇವಾ ಅಭಿನಂದನಾ ಸಮರ್ಪಣೆ

28 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಮನಸೂರ ಗ್ರಾಮದಲ್ಲಿ ಯುನಿವರ್ಸಲ್​ ನಾಲೆಡ್ಜ್​ ಟ್ರಸ್ಟ್​ ಪ್ರೇರಿತ ಗ್ರಾಮ ವಿಕಾಸ ಸೊಸೈಟಿ ಆಯೋಜಿತ ಕರ್ನಾಟಕ ಅಗ್ನಿಹೋತ್ರ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಿದ ಹಿನ್ನೆಯಲ್ಲಿ ನಗರದಲ್ಲಿ ಭಾನುವಾರ ಸೇವಾ ಅಭಿನಂದನಾ ಸಮರ್ಪಣೆ ಸಮಾರಂಭ ಆಯೋಜಿಸಲಾಗಿತ್ತು.

ಆಯೋಜಕ ಜಗದೀಶ ನಾಯಿಕ ಮಾತನಾಡಿ, ಕಾರ್ಯಕ್ರಮ ಯಶಸ್ಸಿಗೆ 8 ಜನ ಜಿಲ್ಲಾ ಸಂಯೋಜಕರು, 74 ವಿಭಾಗ ಸಂಯೋಜಕರು ಹಾಗೂ 482 ಅಗ್ನಿ ಮುಖಂಡರು, ದಾನಿಗಳು, ಸ್ವಯಂ ಸೇವಕರು ಶ್ರಮಿಸಿದ್ದಾರೆ. ಇದೇ ಕಾರಣಕ್ಕೆ 11,111 ಕುಟುಂಬಗಳ ಅಗ್ನಿಹೋತ್ರ ನಡೆಸಿ ನೋಬೆಲ್​ ವರ್ಲ್ಡ್​ ರೆಕಾರ್ಡ್​ ಸೃಷ್ಟಿಸಲು ಸಾಧ್ಯವಾಗಿದೆ. ಇಂತಹ ಸತ್ಕಾರ್ಯದಲ್ಲಿ ತೊಡಗಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದರು.

ಮಾಸ್ಟರ್​ ರೋಹನ್​ ಶಿರಿ, ಶಮ್ಮಿ ಶಿರಿ, ಗ್ರಾಮ ವಿಕಾಸ ಸೊಸೈಟಿ, ಯುನಿವರ್ಸಲ್​ ನಾಲೆಡ್ಜ್​ ಟ್ರಸ್ಟ್​ ಪದಾಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net