ಸೇವೆ ಪ್ರಾಮಾಣಿಕವಾಗಿರಲಿ

21ckd1-Web
ಚಿಕ್ಕೋಡಿ ತಾಲೂಕು ಭೂನ್ಯಾಯ ಮಂಡಳಿಗೆ ಸರ್ಕಾರದ ಅಧಿಕಾರೇತರ ಸದಸ್ಯರಾಗಿ ನೇಮಕಗೊಂಡಿರುವ ದಾನಪ್ಪ ಕೊಟಬಾಗಿ ಅವರನ್ನು ಸತೀಶ ಅಪ್ಪಾಜಿಗೋಳ ಸನ್ಮಾನಿಸಿದರು. ಅಪ್ಪಾಸಾಹೇಬ ಚೌಗಲೆ, ಪಕ್ಷದ ಕಾರ್ಯಕರ್ತರು ಇದ್ದರು.
Published on

ಚಿಕ್ಕೋಡಿ: ಭಾರತೀಯ ಜನತಾ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡ ಚಿಕ್ಕೋಡಿ ತಾಲೂಕಿನ ನಾಲ್ವರನ್ನು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು ತಾಲೂಕು ಭೂನ್ಯಾಯ ಮಂಡಳಿಗೆ ಆಯ್ಕೆ ಮಾಡಿರುವುದು ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ ಹೇಳಿದ್ದಾರೆ.

ಸೋಮವಾರ ಹಾಲಟ್ಟಿಯ ಾರ್ಮ್‌ಹೌಸ್‌ನಲ್ಲಿ ಚಿಕ್ಕೋಡಿ ತಾಲೂಕು ಭೂನ್ಯಾಯ ಮಂಡಳಿಗೆ ಸರ್ಕಾರದ ಅಧಿಕಾರೇತರ ಸದಸ್ಯರಾಗಿ ನೇಮಕಗೊಂಡಿರುವ ರಾಮಕೃಷ್ಣ
ಬಾಕಳೆ,(ವಕೀಲರು) (ಯಕ್ಸಂಬಾ) ದಾನಪ್ಪ ಕೊಟಬಾಗಿ (ನಾಗರಮುನ್ನೋಳ್ಳಿ), ಸುರೇಂದ್ರ ಗೌರಾಯಿ (ಪಟ್ಟಣಕುಡಿ), ಬಾಬಾಸಾಹೇಬ ಕೆಂಚಣ್ಣವರ(ಕೆರೂರ) ಅವರನ್ನು ಸನ್ಮಾನಿಸಿ ಮಾತನಾಡಿದರು. ಆಯ್ಕೆಯಾದವರು ಪ್ರಾಮಾಣಿಕ ಸೇವೆ ಮಾಡಿ ಜನರಿಗೆ ಅಗತ್ಯ ಅನುಕೂಲ ಒದಗಿಸಿಕೊಡಬೇಕು ಎಂದರು.

ಎಂಎಲ್‌ಸಿ ಮಹಾಂತೇಶ ಕವಟಗಿಮಠ ಹಾಗೂ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಪಕ್ಷದ ನಿಷ್ಠಾವಂತರನ್ನು ಗುರುತಿಸಿ ಅವರಿಗೆ ನ್ಯಾಯಸಮ್ಮತ ಸ್ಥಾನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಭವಿಷ್ಯದಲ್ಲಿ ಹೆಚ್ಚಿನ ಸ್ಥಾನ ಸಿಗುವಂತಾಗಲಿ ಎಂದರು. ಅಪ್ಪಾಸಾಹೇಬ ಚೌಗಲೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net