ಸಹಕಾರ ಕ್ಷೇತ್ರದಲ್ಲಿ ಸೇವಾ ಮನೋಭಾವ ಮುಖ್ಯ

15 mdg 8
Published on

ಮೂಡಿಗೆರೆ: ಸಹಕಾರ ಕ್ಷೇತ್ರದ ಬೆಳವಣಿಗೆಗೆ ಲಾಭ ನಷ್ಟದ ವ್ಯವಹಾರಕ್ಕಿಂತ ಸೇವಾ ಮನೋಭಾವನೆ ಮುಖ್ಯ. ರೈತರು ಮತ್ತು ಷೇರುದಾರರ ಶೇಯೋಭಿವೃದ್ಧಿ ಸಹಕಾರ ಸಂಘಗಳ ಧ್ಯೇಯವಾಗಿದ್ದಾಗ ಮಾತ್ರ ಜನರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಬ್ಯಾಂಕ್, ಟಿಎಪಿಸಿಎಂಎಸ್ ಹಾಗೂ ತಾಲೂಕಿನ ಎಲ್ಲ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳ ಸಹಯೋಗದಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿವಿಧ ಸಹಕಾರ ಸಂಘಗಳ ಮೂಲಕ ಸರ್ಕಾರ ರೈತರಿಗೆ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಈ ಯೋಜನೆಗಳು ಸಮಾಜದ ಕಟ್ಟಕಡೆ ವ್ಯಕ್ತಿಗೆ ತಲುಪಿದಾಗ ಮಾತ್ರ ಸರ್ಕಾರದ ಉದ್ದೇಶ ಈಡೇರಿದಂತಾಗುತ್ತದೆ ಎಂದರು.

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ. ಸಹಕಾರ ವ್ಯಾಪ್ತಿಯಲ್ಲಿ ರಾಜಕೀಯದಲ್ಲಿ ಮುಗುಳದೆ ರೈತಾಪಿ ವರ್ಗದವರ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಕಾರ್ಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ಪಕೃತಿಏರಿಳಿತದಿಂದ ರೈತರ ಬದುಕು ಕಷ್ಟಕರವಾಗಿದೆ. ಹವಾಮಾನ ವೈಪರೀತ್ಯದಿಂದ ಪ್ರತಿ ಹಂತದಲ್ಲಿಯೂ ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ.ಇಂತಹ ಸೂಕ್ಷ್ಮವಿಚಾರವನ್ನು ಗಮನದಲ್ಲಿಟ್ಟುಕೊಂಡು ಸಹಕಾರಿ ಸಂಸ್ಥೆಗಳು ಸಕಾಲದಲ್ಲಿ ರೈತರ ನೆರವಿಗೆ ಬರಬೇಕು ಎಂದು ತಿಳಿಸಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಡಾ.ಜಿ.ಎಸ್.ಮಹಾಬಲ, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ.ದಿವಾಕರ್, ಬಿ.ಸಿ.ಲೋಕಪ್ಪಗೌಡ, ಎಚ್.ಬಿ.ಶಿವಣ್ಣ, ರಾಜಮ್ಮ, ಬಿ.ಕೆ.ಲಕ್ಷ್ಮಣ್ ಕುಮಾರ್, ವಿ.ಕೆ.ಶಿವೇಗೌಡ, ಎನ್.ಜೆ.ಜಯರಾಂ, ಬಿ.ಎಲ್.ಸಂದೀಪ್, ಜಿ.ಕೆ.ಮಂಜಪ್ಪಯ್ಯ, ಡಿ.ಬಿ.ಜಯಪ್ರಕಾಶ್, ಬಿ.ಆರ್.ಬಾಲಕೃಷ್ಣ, ಎಂ.ವಿ.ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net