ಅಗತ್ಯಕ್ಕೆ ಅನುಗುಣವಾಗಿ ಸೇವೆ

Mul_requirement
Published on

ಮೂಲ್ಕಿ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ವಿಶ್ವಾದ್ಯಂತ ಸುವಾರು 14 ಲಕ್ಷ ಸದಸ್ಯರ ಮೂಲಕ ಸವಾಜದ ಅಗತ್ಯಗಳಿಗೆ ಅನುಗುಣವಾಗಿ ಸ್ಪಂದಿಸಿ ಸೇವೆ ನೀಡುತ್ತಿದೆ ಎಂದು ಲಯನ್ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ. ಹೇಳಿದರು.

ಮೂಲ್ಕಿ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಬಳಿಕ ಪತ್ರಿಕಾ ಪ್ರತಿನಿಧಿಗಳ ಜತೆ ವಾತನಾಡಿದರು.

ಜಿಲ್ಲಾ ಲಯನ್ಸ್ ಕ್ಲಬ್ ವತಿಯಿಂದ ಮಂಗಳೂರಿನ ಪಿಲಿಕುಳದಲ್ಲಿ ಬೆಲೆಬಾಳುವ ಗಿಡಗಳನ್ನು ನೆಡುವ ಮೂಲಕ ವನ ಮಹೋತ್ಸವ, ಅಸಹಾಯಕರಿಗೆ, ಅಪಘಾತಕ್ಕೀಡಾದವರಿಗೆ ರೂ. ಹತ್ತು ಲಕ್ಷ ವೆಚ್ಚದಲ್ಲಿ ಎಮರ್ಜೆನ್ಸಿ ಕಿಟ್ ನೀಡಲಾಗಿದೆ. 50 ಜನರಿಗೆ ಕತಕ ಅವಯವ ಜೋಡಣೆ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ರೋಲ್ಫಿ ಡಿಕೋಸ್ಟ ವಾತನಾಡಿ, ಮೂಲ್ಕಿ ಲಯನ್ಸ್ ಕ್ಲಬ್ ವತಿಯಿಂದ ಅನೇಕ ಸೇವಾ ಕಾರ್ಯಕ್ರಮಗಳು ನಡೆದಿವೆ. ಇದರ ಉಪಯೋಗವನ್ನು ಜನತೆ ಪಡೆಯುತ್ತಿದ್ದಾರೆ. ಹಾಗಾಗಿ ಲಯನ್ಸ್ ಸೇವಾ ಕಾರ್ಯಗಳು ಸದಾ ಶ್ಲಾಘನೀಯ ಎಂದರು.

ಜಿಲ್ಲಾ ಸಂಪುಟ ಕಾರ್ಯದರ್ಶಿ ಗೀತಾ ರಾವ್, ಮೂಲ್ಕಿ ಲಯನ್ಸ್ ಪದಾಧಿಕಾರಿಗಳಾದ ಸುಜಿತ್ ಸಾಲ್ಯಾನ್, ಪೂರ್ವಾಧ್ಯಕ್ಷೆ ಶೀತಲ್ ಸುಶೀಲ್, ಸುಶೀಲ್ ಬಂಗೇರ, ಉದಯ ಅಮೀನ್ ಮಟ್ಟು, ಶೋಭಾ ಸುಜಿತ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net