ಗಣತಿದಾರರಿಗೆ ತಲೆನೋವಾದ ಸಮೀಕ್ಷೆ

JLR ph 2 a Sep 23 Samikshe
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಜಗಳೂರು: ಸರ್ವರ್ ಸಮಸ್ಯೆ, ತಾಂತ್ರಿಕ ದೋಷ, ವಿದ್ಯುತ್ ಯುಎಚ್​ಐಡಿ ಸಂಖ್ಯೆ ಅಸ್ಪಷ್ಟ, ಮನೆ ಪಟ್ಟಿ ಕೊರತೆ, ಸಮಂಜಸ ಜಿಯೋ ಮ್ಯಾಪಿಂಗ್ ಇಲ್ಲ, ಸ್ಪಂದಿಸದ ಜನ, ಸ್ಥಳಿಯ ಸಂಸ್ಥೆಗಳಿಂದ ಪ್ರಚಾರದ ಕೊರತೆ, ಗಣತಿದಾರರಿಗೆ ಪ್ರಶ್ನೆ, ದಾಖಲೆ ನೀಡಲು ಜನರ ಹಿಂದೇಟು..!

ಹೌದು, ಎರಡು ದಿನಗಳಿಂದ ಶುರುವಾದ ಜಾತಿಗಣತಿ ಸಮೀಕ್ಷೆಗೆ ಹೀಗೆ ಹತ್ತಾರು ಸಮಸ್ಯೆಗಳು, ವಿವಾದ ಮತ್ತು ಗೊಂದಲ ಎದುರಾಗಿದೆ.

ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಜಾತಿಗಣತಿ ಎಂದು ಕರೆಯಲ್ಪಡುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸೋಮವಾರದಿಂದ ಪ್ರಾರಂಭವಾಗಿದ್ದು, ಮನೆ ಮನೆಗೆ ತೆರಳಿ ದತ್ತಾಂಶ ಸಂಗ್ರಹಿಸಲು ಮುಂದಾದ ಗಣತಿದಾರರಿಗೆ ಸಮೀಕ್ಷೆ ದೊಡ್ಡ ತಲೆನೋವಾಗಿ ಪರಿಣಿಸಿದೆ.

ಜಗಳೂರು ತಾಲೂಕಿನಲ್ಲಿ ಜಾತಿಗಣತಿ ಸಮೀಕ್ಷೆಗೆ 564 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಅದರಲ್ಲಿ 412 ಗಣತಿದಾರರು, 21 ಮೇಲ್ವಿಚಾರಕರು ಸೇರಿ 433 ಶಿಕ್ಷಕರು ಸಮೀಕ್ಷೆ ಆರಂಭಿಸಿದ್ದರು.

ಮಂಗಳವಾರ ತಮ್ಮ ಕ್ಷೇತ್ರ ವ್ಯಾಪ್ತಿಗೆ ತೆರಳಿದ್ದ ಗಣತಿದಾರರಿಗೆ ಸರ್ವರ್ ಸಮಸ್ಯೆ, ತಾಂತ್ರಿಕ ಸಮಸ್ಯೆ ಎದುರಾಗಿ ಸಮೀಕ್ಷೆ ಮಾಡಲಾಗದೆ ಪರದಾಡುವಂತಾಯಿತು. ಯಾವೊಬ್ಬ ಗಣತಿದಾರರಿಗೂ ಇಲಾಖೆಯಿಂದ ಗಣತಿಯ ಪಟ್ಟಿ ತಲುಪಿಲ್ಲ. ಯಾವ ಊರಿಗೆ ಹೋಗಬೇಕು. ಯಾವ ಮನೆಗೆ ಹೋಗಬೇಕು ಎಂಬ ಮಾಹಿತಿ ಇಲ್ಲದೆ ಶಿಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಅಲ್ಲದೇ ಸಮೀಕ್ಷೆ ಆಪ್ ಕೂಡ ಡೌನ್​ಲೋಡ್ ಆಗಲಿಲ್ಲ. ಇದರಿಂದ ಶಿಕ್ಷಕರು ಸಮಸ್ಯೆ ಅನುಭವಿಸಿದರು.

ತಾಲೂಕು ಕಚೇರಿಗೆ ಮುತ್ತಿಗೆ: ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ನೂರಾರು ಶಿಕ್ಷಕರು ನೇರವಾಗಿ ಬಿಇಒ ಕಚೇರಿಗೆ ತೆರಳಿ ಸಮೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಬಿಇಒ ಹಾಲಮೂರ್ತಿ ಬಳಿ ಸಮಸ್ಯೆ ಹೇಳಿಕೊಂಡರು. ಅಲ್ಲಿಂದ ನೇರವಾಗಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.

ಸಮೀಕ್ಷೆಗೆ ರೂಪಿಸಿದ ಆಪ್​ನಿಂದ ತಾಂತ್ರಿಕ ಸಮಸ್ಯೆಯುಂಟಾಗಿ ಒಂದೂ ಮನೆಯನ್ನು ಜಾತಿಗಣತಿ ಮಾಡಿಲ್ಲ, ಸರ್ವರ್ ಕೈ ಕೊಟ್ಟಿದೆ. ಹೀಗಾದರೆ ಹೇಗೆ ಸಮೀಕ್ಷೆ ಮಾಡಬೇಕು ಎಂದು ಶಿಕ್ಷಕರು ಪ್ರಶ್ನಿಸಿದರು.

ತಹಸೀಲ್ದಾರ್- ಶಿಕ್ಷಕರ ನಡುವೆ ಮಾತಿನ ಸಮರ: ತಾಲೂಕು ಕಚೇರಿಯಲ್ಲಿ ನಡೆದ ತುರ್ತು ಸಭೆಯಲ್ಲಿ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮತ್ತು ಶಿಕ್ಷಕರ ನಡುವೆ ಮಾತಿನ ಸಮರ ನಡೆಯಿತು. ಗಣತಿ ಕಾರ್ಯದಲ್ಲಿ ಪದೇಪದೆ ಸರ್ವರ್ ಕೈ ಕೊಡುತ್ತಿದೆ. ಬೆಳಗ್ಗೆಯಿಂದ ಆಪ್ ಓಪನ್ ಆಗುತ್ತಿಲ್ಲ. ಹಳ್ಳಿಗಳಲ್ಲಿ ನೆಟ್​ವರ್ಕ್ ಸಿಗುತ್ತಿಲ್ಲ. ಸಮಸ್ಯೆ ಬಗೆಹರಿವವರೆಗೆ ಗಣತಿಗೆ ಹೋಗುವುದಿಲ್ಲವೆಂದು ಶಿಕ್ಷಕರು ಪಟ್ಟು ಹಿಡಿದರು. ಇದು ಕೇವಲ ತಾಲೂಕಿನ ಸಮಸ್ಯೆಯಲ್ಲ, ರಾಜ್ಯದೆಲ್ಲೆಡೆ ತೊಂದರೆ ಇದೆ. ಸರ್ಕಾರದ ಆದೇಶದಂತೆ ಕೆಲಸ ಮಾಡುವುದು ನಿಮ್ಮ ಕರ್ತವ್ಯ ಎಂದು ತಹಸೀಲ್ದಾರ್ ಸೈಯದ್ ಕಲೀಂ ಏರುಧ್ವನಿಯಲ್ಲಿ ಶಿಕ್ಷಕರಿಗೆ ತಾಕೀತು ಮಾಡಿದರು.

ಅದಕ್ಕೆ ಶಿಕ್ಷಕರು, ಕಚೇರಿಯಲ್ಲಿದ್ದು ಆದೇಶ ಮಾಡುವುದು ಸುಲಭ ಸ್ಥಳಕ್ಕೆ ಬಂದು ಸಾರ್ವಜನಿಕರ ಮಧ್ಯೆ ಕೆಲಸ ಮಾಡುವುದು ತುಂಬ ಕಷ್ಟ ಎಂದು ಉತ್ತರಿಸಿದರು. ಹೀಗೆ ಮಾತಿಗೆ ಮಾತು ಬೆಳೆದು ಅಧಿಕಾರಿ ಮತ್ತು ಶಿಕ್ಷಕರ ನಡುವೆ ಮಾತಿನ ಸಮರ ನಡೆಯಿತು.

ಸ್ಥಳ ಬದಲಾವಣೆಗೆ ಆಕ್ಷೇಪ: ಈಗಾಗಲೇ ಗಣತಿಗೆ ನೇಮಿಸಿರುವ ಶಿಕ್ಷಕರನ್ನು ಸ್ಥಳೀಯ ಗ್ರಾಮಗಳನ್ನು ಬಿಟ್ಟು ಬೇರೆ ಬೇರೆ ಗ್ರಾಮಗಳಿಗೆ ಗಣತಿಗೆ ನೇಮಿಸಿರುವುದು ಖಂಡನೀಯ. ಗುರುತು ಪರಿಚಯವಿಲ್ಲದ ಊರುಗಳಲ್ಲಿ ಸಮೀಕ್ಷೆ ತೆರಳಿದರೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿಲ್ಲ. ಆಧಾರ್ ಕಾರ್ಡ್ ಸೇರಿ ಇತರ ದಾಖಲಾತಿ ಕೇಳಿದರೆ, ನೀವು ನಮ್ಮೂರ ಶಿಕ್ಷಕರಲ್ಲ, ನಿಮಗೇಕೆ ದಾಖಲಾತಿ ಕೊಡಬೇಕು ಎಂದು ಮುಲಾಜಿಲ್ಲದೆ ಮಾತನಾಡುತ್ತಾರೆ. ಕೆಲಸ ಮಾಡುವ ಗ್ರಾಮಗಳಲ್ಲಿ ಮುಖ ಪರಿಚಯವಿರುವುದರಿಂದ ಸಹಕರಿಸುತ್ತಾರೆ. ಆದ್ದರಿಂದ ನಮ್ಮ ಕ್ಷೇತ್ರಗಳಲ್ಲಿ ಗಣತಿ ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಏನಾದರೂ ಸಮಸ್ಯೆಗಳಾದರೆ ನಾವು ಹೊಣೆಗಾರರಲ್ಲವೆಂದು ಶಿಕ್ಷಕರು ಸ್ಪಷ್ಟಪಡಿಸಿದರು.

ಬಿಇಒ ಹಾಲಮೂರ್ತಿ, ಶಿಕ್ಷಕರಾದ ಹನುಮಂತೇಶ್, ಕೃಷ್ಣಪ್ಪ, ಜಿ.ಬಿ. ನಾಗರಾಜ್, ಶಿವಣ್ಣ, ಉಮೇಶ್, ಬಸವರಾಜ್, ಈರಪ್ಪ, ಉಲೇಪ್ಪ, ಶಕುಂತಲಮ್ಮ, ಓಂಕಾರಮ್ಮ, ಚಂದ್ರಕಲಾ, ಶರಣಪ್ಪ, ರೂಪಾ, ರಾಜು, ತಿಮ್ಮಣ್ಣ, ಓಂಕಾರಮ್ಮ, ಸುನಿತಾ, ನಾಗರಾಜ್, ತಿಪ್ಪೇಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net