

ಮಂಡ್ಯ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ನಡೆಯುತ್ತಿರುವ ಜಾತಿಗಣತಿ ಸರ್ವರ್ ಸಮಸ್ಯೆಯಿಂದ ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಸಮಸ್ಯೆ ಬಗೆಹರಿಸಿ ಶೇ.100ರಷ್ಟು ಸಮೀಕ್ಷೆ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಕಾಲಾವಧಿ ವಿಸ್ತರಿಸಬೇಕು ಎಂದು ವಿಶ್ವಜ್ಞಾನಿ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ತಾಳಶಾಸನ ಮೋಹನ್ ಒತ್ತಾಯಿಸಿದರು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ನೇತೃತ್ವದಲ್ಲಿ ಮೇ 5ರಿಂದ 17ವರೆಗೆ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಗಣತಿ ಅಪೂರ್ಣಗೊಳ್ಳದಂತೆ ಎಚ್ಚರವಹಿಸಬೇಕು. ಸಮುದಾಯದವರು ಸರ್ಕಾರದ ಸಲವತ್ತುಗಳನ್ನು ಸರಿಯಾಗಿ ಪಡೆಯಬೇಕಾದರೆ ಮನೆ ಮನೆಗೆ ಗಣತಿಗೆ ಬಂದವರಿಗೆ ನೈಜ ಜಾತಿ ನಮೂದು ಮಾಡುವಂತೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ನಂಜುಂಡ ಮೌರ್ಯ, ಜಿಲ್ಲಾ ಸಂಘಟನಾ ಸಂಚಾಲಕ ವಿಜಯ್‌ಕುಮಾರ್, ಸಿ.ಕೆ.ಪಾಪಯ್ಯ, ಗಣೇಶ್, ಸುಲೋಚನಾ, ಪಾಪಮ್ಮ, ಬಾಲರಾಜು ಇದ್ದರು.