

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಜಿಲ್ಲೆಯಲ್ಲಿ ಜೋಳ ಬೆಳೆದ ರೈತರು ಖರೀದಿ ಕೇಂದ್ರ ಮೂಲಕ ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಖರೀದಿ ಕೇಂದ್ರ ಆರಂಭಿಸಿದ ಸರ್ಕಾರ ಸರ್ವರ್ ಸಮಸ್ಯೆಯಿಂದ ಒಂದೇ ದಿನದಲ್ಲಿ ಬಂದ್ ಮಾಡಲಾಗಿದ್ದರಿಂದ ಕಂಗೆಟ್ಟ ರೈತರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿz್ದÁರೆ.
ಕಳೆದ ಬಾರಿ ಜಿಲ್ಲೆಯಲ್ಲಿ ತೀವ್ರ ಬರಗಾಲದಂದ ಬೆಳೆ ಕೈಗೆ ಬಾರದೆ ಇರುವುದರಿಂದ ಯಾವುದೇ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿರಲಿಲ್ಲ. ಆದರೆ ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಬೆಳೆಗಳು ಸಹ -Àಸಲು ಚನ್ನಾಗಿ ಬಂದಿದ್ದವು, ಬೆಳೆ ಜೋಳ ಬೆಳೆಯನ್ನು ಸರ್ಕಾರ ನಿಗದಿ ಮಾಡಿದ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬೇಕು ಎಂದರೇ ಕೇವಲ ಒಂದೇ ದಿನ ಮಾತ್ರ ಪ್ರಾರಂಬ ಮಾಡಿ ಸರ್ವರ್ ಸಮಸ್ಯೆಯಿಂದ ಬಂದ್ ಮಾಡಲಾಗಿರುವುದರಿಂದ ಜೋಳಕ್ಕೆ ಹುಳು ಹತ್ತುವ ಆತಂಕವನ್ನು ರೈತರು ಎದುರಿಸುತ್ತಿದ್ದಾರೆ.
ಒಂದೇ ದಿನ ಮಾತ್ರ ಪ್ರಾರಂಭ
ಜಿ¯್ಲೆಯಲ್ಲಿ ಒಂದೆಡೆ ನೀರಾವರಿ ಪ್ರದೇಶಗಳಲ್ಲಿ ಭತ್ತ ಬೆಳೆದರೆ, ನೀರಿನ ಸೌಲಭ್ಯವಿಲ್ಲದ ರೈತರು ಬಿಳಿ ಜೋಳವನ್ನು ಬೆಳೆಯುತ್ತಾರೆ. ನೀರು ಕಟ್ಟಿ ಮೆಣಸಿನಕಾಯಿ, ಹತ್ತಿ, ತೊಗರಿ ಬೆಳೆ ಬೆಳೆದು ಬೆಲೆ ಸಿಗದೆ ಒz್ದÁಡುವುದೇಕೆ ಎಂದು ಈ ಬಾರಿ ಸಾಕಷ್ಟು ಜನ ರೈತರು ಬಿಳಿಜೋಳವನ್ನು ಬೆಳೆದಿದ್ದರೆ. ಸರ್ಕಾರ ಪ್ರತಿ ವರ್ಷದಂತೆ ಖರೀದಿ ಕೇಂದ್ರ ತೆರೆದು ಜೋಳ ಖರೀದಿಸುತ್ತೆ ಅಂತ ನಂಬಿಕೆಯ¯್ಲÉÃ ಜೋಳ ಬೆಳೆದ ರೈತರು ಇವಾಗ ಆತಂಕದ ಪರಸ್ಥಿತಿ ಎದುರಿಸುತ್ತಿz್ದÁರೆ.
ಎರಡು ತಿಂಗಳಿAದ ಜೋಳದ ರಾಶಿ ಮಾಡಿ ಖರೀದಿ ಕೇಂದ್ರದ ಆರಂಭಕ್ಕೆ ಕಾಯುತ್ತಿದ್ದ ರೈತರಿಗೆ ಸರ್ಕಾರ ನಿರಾಸೆ ಉಂಟು ಮಾಡುತ್ತಿದೆ. ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಸುಮಾರು ೧೦ ಕ್ಕೂ ಅಽಕ ಕೇಂದ್ರಗಳನ್ನು ಏ.೧೫ ಕ್ಕೆ ಆರಂಭವಾಗಿವೆ. ಆದರೆ ಆರಂಭವಾದ ಕೇವಲ ನಾಲ್ಕೆÊದು ಗಂಟೆಗಳ¯್ಲÉÃ ಖರೀದಿ ಕೇಂದ್ರ ಸರ್ವರ್ ಸಮಸ್ಯೆಯಿಂದ ಬಂದ್ ಆಗಿದೆ. ರೈತರ ನೋಂದಣಿ ಹಾಗೂ ಖರೀದಿ ಟಾರ್ಗೆಟï ಮುಗಿದಿದೆಂದು ಅಽಕಾರಿಗಳು ಹೇಳುತ್ತಿz್ದÁರೆಂದು ರೈತರು ಆಕ್ರೋಶ ಗೊಂಡಿz್ದÁರೆ. ಕೆಲವೇ ಗಂಟೆಗಳಲ್ಲಿ ಖರೀದಿ ಟಾರ್ಗೆಟï ಹೇಗೆ ಮುಗಿಯುತ್ತೆ, ಸರ್ಕಾರವನ್ನು ನಂಬಿ ಜೋಳ ಬೆಳೆದ ನಮ್ಮ ಕತೆ ಏನು ಅಂತ ರೈತರು ಆಕ್ರೋಶ ಹೊರಹಾಕಿz್ದÁರೆ.
ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ
ರಾಜ್ಯ ಸರ್ಕಾರ ಬಿಳಿ ಜೋಳಕ್ಕೆ ಖರೀದಿ ಕೇಂದ್ರದಲ್ಲಿ ಕ್ವಿಂಟಾಲ್‌ಗೆ ೩೩೭೦ ರೂ.ನಿಗದಿ ಮಾಡಲಾಗಿದ್ದು, ಆದರೆ ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ ಕೇವಲ ೧೫೦೦ ರೂಗೆ ಜೋಳ ಮಾರಾಟವಾಗುತ್ತಿದೆ. ಹೀಗಾಗಿ ರೈತರು ವೈe್ಞÁನಿಕ ಬೆಲೆ ಸಿಗಬೇಕೆಂದು ಖರೀದಿ ಕೇಂದ್ರಕ್ಕೆ ಬರುತ್ತಿz್ದÁರೆ. ಆದರೆ ಇಲ್ಲಿನ ಸಿಬ್ಬಂದಿ ಸರ್ವರï ಸಮಸ್ಯೆಯಿರುವುದರಿಂದ ರೈತರ ನೊಂದಣಿ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಇದುವರೆಗೆ ಮುಂಗಾರು ಬೆಳೆಗೆ ಕೇವಲ ೫೨ ರೈತರ ೫,೨೭೦ ಕ್ವಿಂಟಾಲï ನೋಂದಣಿಯಾದರೆ ,ಹಿಂಗಾರು ಬೆಳೆಯ ೩೪ ರೈತರ ೩೭೮೦ ಕ್ವಿಂಟಾಲï ಖರೀದಿಗೆ ನೋಂದಣಿ ಆಗಿದೆ.
ಇದರ ಜತೆಗೆ ಲಾರಿ ಮಾಲೀಕರ ಮುಷ್ಕರದಿಂದ ಖರೀದಿ ಮಾಡಿದ ಜೋಳದ ಸಾಗಣೆಯೂ ಸಮಸ್ಯೆಯಾಗಿದೆ. ಜೋಳ ಸಾಗಣೆ ಸಮಸ್ಯೆಯಿಂದ ಖರೀದಿಗೆ ವಿಳಂಬವಾಗುತ್ತಿದೆಯಾ ಎನ್ನುವ ಅನುಮಾನಗಳು ಸಹ ರೈತರನ್ನು ಕಾಡುತ್ತಿದೆ. ಕೂಡಲೇ ಖರೀದಿ ಆರಂಭಿಸದಿದ್ದರೆ ಹೋರಾಟಕ್ಕೆ ಮುಂದಾಗುವುದಾಗಿ ರೈತರು ಎಚ್ಚರಿಕೆ ನೀಡಿz್ದÁರೆ.
ತಾಂತ್ರಿಕ ಸಮಸ್ಯೆಯಿಂದ ಜೋಳ ಖರೀದಿ ನಿಲ್ಲಿಸಲಾಗಿದ್ದು, ಸರ್ವರ್ ಸಮಸ್ಯೆ ಕುರಿತು ಈಗಾಗಲೇ ಹಿರಿಯ ಅಽಕಾರಿಗಳ ಗಮನಕ್ಕೆ ತರಲಾಗಿದೆ. ಎರಡು ದಿನದಲ್ಲಿ ಸಮಸ್ಯೆ ಬಗೆ ಹರಿದು ನೋಂದಣಿ ಪ್ರಕ್ರಿಯೆ ಪ್ರಾರಂಭ ಮಾಡಲಾಗುವುದು.
ನರಸಿಂಹಪ್ಪ ವ್ಯವಸ್ಥಾಪಕ, ಜೋಳ ಖರೀದಿ ಕೇಂದ್ರ ರಾಯಚೂರು.
ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಬೆಳೆದ ಜೋಳಕ್ಕೆ ನೋಂದಣಿ ಸಮಸ್ಯೆ, ಮುಂಗಾರಿನಲ್ಲಿ ಬೆಳೆದ ಜೋಳ ಖರೀದಿ ಮಾಡಿದ ಮೇಲೆ ಲಾರಿಗಳ ಸಮಸ್ಯೆ ಎದುರಾಗಿದ್ದು, ಈಗಾಗಲೇ ಜಿಲ್ಲಾಽಕಾರಿಗಳ ಗಮನಕ್ಕೆ ತರಲಾಗಿದ್ದು,ಸೋಮವಾರದೊಳಗೆ ಪ್ರಾರಂಭ ಮಾಡದಿದ್ದರೆ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ.
ಚಾಮರಸ್ ಮಾಲೀ ಪಾಟೀಲ್ ರಾಜ್ಯ ಗೌರವಾಧ್ಯಕ್ಷ ರೈತ ಸಂಘ ರಾಯಚೂರು