ಸರ್ವರ್ ಡೌನ್ , ಪಡಿತರ ಚೀಟಿ ತಿದ್ದಪಡಿಗೆ ತೊಂದರೆ

juk3 ss 3 shanivarasanthe grama 1
Published on


ಶನಿವಾರಸಂತೆ: ಪಡಿತರ ಚೀಟಿ ತಿದ್ದುಪಡಿ ಸಂಬಂಧ ಮಂಗಳವಾರ ಹಾಗೂ ಬುಧವಾರ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸರ್ವರ್ ಡೌನ್ ಸಮಸ್ಯೆಯಿಂದ ಫಲಾನುಭವಿಗಳು ಪರದಾಡಿದರು. ಗ್ರಾಮೀಣ ಭಾಗದಲ್ಲಿ ಜನರು ತಮ್ಮ ಕೆಲಸ, ಕಾರ್ಯ ಬಿಟ್ಟು ತಿದ್ದುಪಡಿಗೆ ಆಗಮಿಸಿದ್ದರು. ಆದರೆ ಒಂದೆರಡು ಸೇರ್ಪಡೆ ಬಿಟ್ಟರೆ ಮಧ್ಯಾಹ್ನದ ವೇಳೆಗೆ ಸರ್ವರ್ ಸಮಸ್ಯೆ ಎದುರಾಗಿ ತೊಂದರೆಯಾಯಿತು. ಅರ್ಜಿ ಸಲ್ಲಿಸಲು ಬಂದವರು ಗ್ರಾಮ ಒನ್ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು.


ಸರ್ಕಾರದ ಯೋಜನೆಯನ್ನು ನೀಡುವಾಗ ಸಾರ್ವಜನಿಕರಿಗೆ ಅದು ಸದುಪಯೋಗ ಆಗುತ್ತದೋ ಇಲ್ಲವೊ ಎಂದು ಪರಿಶೀಲನೆ ಮಾಡಬೇಕು. ಆದರೆ ಪಡಿತರ ಚೀಟಿ ಸೇರ್ಪಡೆಗೆ ಹಾಗೂ ತಿದ್ದುಪಡಿಗೆ ವರ್ಷದಿಂದ ಅವಕಾಶ ಸಿಕ್ಕಿರಲಿಲ್ಲ. ಇದೀಗ ಕೇವಲ ಎರಡು ದಿನ, ಎರಡು ಗಂಟೆ ಸಮಯಾವಕಾಶ ನೀಡಿ ಕಾಟಾಚಾರಕ್ಕೆ ಮಾಡಿದಂತಿದೆ. ಪಡಿತರ ಚೀಟಿ ಸಮಸ್ಯೆ ದೊಡ್ಡದಾಗಿದೆ. ನಿರಂತರವಾಗಿ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡಿಗೆ ಸಾರ್ವಜನಿಕರಿಗೆ ಅವಕಾಶ ನೀಡಬೇಕು ಎಂದು ಜನರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net