ವೈದ್ಯರಾಗಿ ಸಮಾಜಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿ

CTD 9 MEDICAL BASAVA (1)
Published on

ಚಿತ್ರದುರ್ಗ: ಉತ್ತಮ ಶಿಕ್ಷಣದೊಂದಿಗೆ ವೈದ್ಯರಾಗಿ ಸಮಾಜಕ್ಕೆ ಅತ್ಯುತ್ತಮ ಸೇವೆ ಸಲ್ಲಿಸುವಂತೆ ಎಂಬಿಬಿಎಸ್‌ಗೆ ಪ್ರವೇಶ ಪಡೆದಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಸಲಹೆ ನೀಡಿದರು.

ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ‘ವೈಟ್‌ಕೋಟ್’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ರ‌್ಯಾಗಿಂಗ್ ಆತಂಕ ಬೇಡ. ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣವಾಗುವತ್ತ ತಮ್ಮ ಗಮನವಿರಲಿ ಎಂದರು.

ಡಾ. ರಾಜೇಶ್, ಡಾ.ಶ್ರೀಷ ಪಾಟೀಲ, ಡಾ.ಎಂ.ಆರ್.ನಾಗೇಂದ್ರಗೌಡ ಮಾತನಾಡಿದರು. ಎಸ್‌ಜೆಎಂ ವಿದ್ಯಾಪೀಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಭರತ್‌ಕುಮಾರ್, ಡೀನ್ ಡಾ.ಪ್ರಶಾಂತ್, ಉಪವೈದ್ಯಕೀಯ ನಿರ್ದೇಶಕ ಡಾ.ರಮೇಶ್, ಮಾನವ ಸಂಪನ್ಮೂಲಾಧಿಕಾರಿ ವಿಜಯಮಠ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net