

ಕಳಸ:ನಟ ಶಿವರಾಜ್‌ಕುಮಾರ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆಯಾಗಲಿ ಎಂದು ಹರಕೆ
ಹೊತ್ತಿದ್ದ ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಕಳಸದ ಕಲಶೇಶ್ವರ
ಸ್ವಾಮಿಗೆ ಉರುಳು ಸೇವೆ ಮಾಡಿ ಹರಕೆ ತೀರಿಸಿದರು. ಬೆಳಗ್ಗೆ ಕಲಶೇಶ್ವರ
ದೇವಸ್ಥಾನಕ್ಕೆ ಆಗಮಿಸಿದ ಕನ್ನಡ ರಾಜು ತೀರ್ಥಸ್ನಾನ ಮಾಡಿ, ಶಿವರಾಜ್ ಕುಮಾರ್
ಹೆಸರಿನಲ್ಲಿ ರುದ್ರಾಭಿಷೇಕ ಮಾಡಿ, ನಂತರ ಶಿವರಾಜ್‌ಕುಮಾರ್ ಭಾವ ಚಿತ್ರ ಹಿಡಿದು
ದೇವಸ್ಥಾನದ ಸುತ್ತ ಉರುಳು ಸೇವೆ ನಡೆಸಿದರು.
ನಂತರ ಮಾತನಾಡಿದ ಅವರು, ಶಿವರಾಜ್ ಕುಮಾರ್‌ಗೆ ಯಶಸ್ವಿ ಶಸ ಚಿಕಿತ್ಸೆ ಆಗಲಿ
ಎಂದು ಕಲಶೇಶ್ವರ ದೇವರಲ್ಲಿ ಉರುಳು ಸೇವೆ ಮಾಡುವುದಾಗಿ ಹರಕೆ
ಮಾಡಿಕೊಂಡಿದ್ದೆ. ಅವರಿಗೆ ಶಸ ಚಿಕಿತ್ಸೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಉರುಳು ಸೇವೆ
ಮಾಡಿ ಹರಕೆ ತೀರಿಸಲಾಗಿದೆ. ಅವರು ಶೀಘ್ರವಾಗಿ ತಾಯ್ನಡಿಗೆ ಮರಳಬೇಕು ಇನ್ನಷ್ಟು
ಹೆಚ್ಚಿನ ಚಿತ್ರಗಳಲ್ಲಿ ನಟಿಸಲು ಎಂದು ಕಲಶೇಶ್ವರ ಸ್ವಾಮಿಯಲ್ಲಿ ಪ್ರಾರ್ಥನೆ
ಮಾಡಲಾಗಿದೆ ಎಂದರು.
ಸಂಘದ ಗೌರವಾಧ್ಯಕ್ಷ ಶರ್ೀ ಮಾತನಾಡಿ, ನಟ,ಸ್ನೇಹಮಯಿ ಹೃದಯ
ಹೊಂದಿರುವ ಶಿವರಾಜ್ ಕುಮಾರ್ ಪ್ರತಿಯೊಬ್ಬರ ಅಭಿಮಾನಿಗಳ ಹೃದಯದಲ್ಲಿ
ಅಚ್ಚಳಿಯದೆ ನೆಲೆಸಿದ್ದಾರೆ. ಇಂತಹ ನಟ ಆದಷ್ಟು ಬೇಗ ಗುಣಮುಖರಾಗಿ ಕರುನಾಡಿಗೆ
ಮರಳಬೇಕು ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಚೌಡನಾಯ್ಕ, ಸದಸ್ಯರಾದ
ರಾಘು, ಅಶೋಕ ಆಚಾರ್ಯ,ಅರವಿಂದ ಆಚಾರ್ಯ, ನಟೇಶ್ ಆಚಾರ್ಯ, ಜಗದೀಶ್
ಭಟ್ ಇದ್ದರು.