

ಹೆಬ್ರಿ: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಕಬ್ಬಿನಾಲೆಯಲ್ಲಿ ನಾಗದೇವರ ಜೀರ್ಣೋದ್ಧಾರ ಅಂಗವಾಗಿ ಬುಧವಾರ ಸರ್ಪ ಸಂಸ್ಕಾರ ಆರಂಭಗೊಂಡು, ಶನಿವಾರ ಸಂಪನ್ನಗೊಂಡಿತು. ಸಂಜೆ ಬಾಧಾಕರ್ಷಣೆ, ರಕ್ಷಾಹೋಮ, ಉಚ್ಚಾಟನಾವಿಧಿ ಜರುಗಿತು.
ತಂತ್ರಿ ಕೆ.ಎಸ್.ರಾಮಕೃಷ್ಣ ತಂತ್ರಿ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ. ಅರ್ಚಕರಾದ ಲಕ್ಷ್ಮೀಶ ಭಾರದ್ವಾಜ್, ನಾರಾಯಣ ಭಟ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಘವೇಂದ್ರ ಭಟ್, ಕೆ.ನಾರಾಯಣ ಭಟ್, ಚಂದ್ರಶೇಖರ ಬಾಯಾರಿ, ಯೋಗಿಂದ್ರ ಹೆಬ್ಬಾರ್, ಸದಾಶಿವ ಶೆಟ್ಟಿ, ಜಗದೀಶ ಪೂಜಾರಿ, ಶೇಖರ್ ಗೌಡ, ರೇಣುಕ ಶೆಟ್ಟಿಗಾರ್, ಗಾಯತ್ರಿ ಮಡಿವಾಳ ಉಪಸ್ಥಿತರಿರುವರು.
ಇಂದು ಅನುಜ್ಞಾಕಳಶ: ಮಾ.9ರಂದು ನಾಗದೇವರಿಗೆ ಅನುಜ್ಞಾಕಳಶ, ಸಂಕೋಚ ವಿಧಾನ, ನೂತನ ಬಿಂಬಗಳ ಶಿಲಾ ಜಲದಿವಾಸ, ಪೂಜೆ ನಡೆಯಲಿದೆ.