

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಯಕ್ಷಗಾನದಲ್ಲಿ ಹಾಸ್ಯಗಾರನ ಸ್ಥಾನ ಮಹತ್ವದ್ದು, ರಂಗಸ್ಥಳದಲ್ಲಿ ಭಾಗವತರು ಪ್ರಧಾನವಾದರೆ, ಚೌಕಿಯಲ್ಲಿ ಹಾಸ್ಯಗಾರನಿಗೇ ಜವಾಬ್ದಾರಿ. ಆತ ಎಲ್ಲರ ಆಗು ಹೋಗುಗಳಿಗೆ ಅನುಕೂಲಕರನಾಗಿ ರಂಗ ಖಾಲಿ ಬೀಳದಂತೆ ನೋಡುವ ಜವಾಬ್ದಾರಿ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಬಂಡು ವಾತಿಗಿಂತ ಗಂಭೀರ ಹಾಸ್ಯ ಅಗತ್ಯ ಎಂದು ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಕಿನ್ನಿಗೋಳಿಯ ಉದಯಗಿರಿಯಲ್ಲಿ ಶುಕ್ರವಾರ ನಡೆದ ಕಲಾವಿದರ ಯಕ್ಷಪಯಣದ ಸ್ವಗತ ಯಕ್ಷಾಯಣ ದಾಖಲೀಕರಣ ಸರಣಿ 6ರ ಕಾರ್ಯಕ್ರಮದಲ್ಲಿ ವಾತನಾಡಿದರು.
ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಿಥುನ್ ಕೊಡೆತ್ತೂರು ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿ, ಬಡತನದ ಹಿನ್ನೆಲೆಯಿಂದ ಬಂದ ಮುಖ್ಯಪ್ರಾಣ ಕಿನ್ನಿಗೋಳಿ, 82ರ ವಯಸ್ಸಿನಲ್ಲೂ ತಾಳಮದ್ದಳೆ, ಯಕ್ಷಗಾನಗಳನ್ನು ನೋಡುವ ಆಸಕ್ತಿ ಹೊಂದಿದ್ದಾರೆ. ಇದು ಹೊಸ ಕಲಾವಿದರಿಗೆ ವಾರ್ಗದರ್ಶಿ. ಎಷ್ಟು ಗೌರವ ಬಂದರೂ ಅಹಂ ಇಲ್ಲದೇ ಕಲಾವಿದ ಹೇಗಿರಬಹುದೆಂಬುದಕ್ಕೆ ಇವರು ವಾದರಿ ಎಂದರು.
ಮುಖ್ಯಪ್ರಾಣ ಕಿನ್ನಿಗೋಳಿ ಅವರನ್ನು ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಗೌರವಿಸಲಾಯಿತು.ವಿವಿ ಯಕ್ಷಗಾನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ವಾತನಾಡಿದರು.
ಕಿನ್ನಿಗೋಳಿ ಪತ್ರಕರ್ತರ ಸಂದ ಅಧ್ಯಕ್ಷ ನಿಶಾಂತ್ ಕಿಲೆಂಜೂರು, ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ಸತೀಶ್ ಕೊಣಾಜೆ, ಉದ್ಯೋಗಿ ಸ್ವಾತಿ ಎಸ್.ರಾವ್, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಚಂದ್ರಶೇಖರ್ ಎಂ.ಬಿ., ರತ್ನಾಕರವರ್ಣಿ ಪೀಠದ ಸಂಶೋಧಕ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಹಾಸ್ಯ ಎಂದರೆ ಜನರಿಗೆ ಬೇಕಾದ್ದನ್ನು ನೀಡುವುದಲ್ಲ. ಜನರ ಮನೋಧರ್ಮವನ್ನು ರೂಪಿಸುವ ಕೆಲಸ. ಹಾಸ್ಯದ ಮೂಲಕ ಜನರನ್ನು ನಗಿಸಿ ರಸಾಸ್ವಾದನೆ ವಾಡಿಸಬಹುದು. ತೆಂಕು ಬಡಗು ಎರಡೂ ತಿಟ್ಟುಗಳಲ್ಲಿಯೂ ಹಾಸ್ಯ ಪಾತ್ರದಲ್ಲಿ ವಿಪುಲ ಅವಕಾಶ ದೊರೆತಿದೆ. ಹಾಸ್ಯ ಕಲಾವಿದನಿಗೆ ತೆಂಕುತಿಟ್ಟಿನಲ್ಲಿ ಸ್ವಾತಂತ್ರ್ಯ ಹೆಚ್ಚು. ಬಡಗಲ್ಲಿ ಶಿಸ್ತು ಹೆಚ್ಚು. ಮುಖ್ಯಪ್ರಾಣ ಕಿನ್ನಿಗೋಳಿ, ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ.
ಮುಖ್ಯಪ್ರಾಣ ಕಿನ್ನಿಗೋಳಿ, ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ.
ಮುಖ್ಯಪ್ರಾಣರು ಐದು ದಶಕಗಳ ತಿರುಗಾಟದ ಅನುಭವಿ. ಕಲಿತದ್ದು 5ನೇ ತರಗತಿಯಾದರೂ ಕಲಾವಿದರಾಗಿ ವಿ.ವಿ. ಸಂಶೋಧನೆಯ ಗಮನ ಸೆಳೆದಿದ್ದಾರೆ. ಕಂದರ, ವೃದ್ಧಭೂಸುರ, ಚಂದಗೋಪ, ವಿಜಯ, ಬಾಹುಕ, ಸಂಜಯ, ದೇವಿಮಹಾತ್ಮೆಯ ಚಾರಕ ಮೊದಲಾದ ಹಲವು ಪಾತ್ರಗಳಿಗೆ ರಂಗದಲ್ಲಿ ಜೀವತುಂಬಿದ್ದಾರೆ. ಡಾ.ಧನಂಜಯ ಕುಂಬ್ಳೆ, ವಿವಿ ಯಕ್ಷಗಾನ ಕೇಂದ್ರದ ನಿರ್ದೇಶಕ.
ಡಾ.ಧನಂಜಯ ಕುಂಬ್ಳೆ, ವಿವಿ ಯಕ್ಷಗಾನ ಕೇಂದ್ರದ ನಿರ್ದೇಶಕ.