ಸರಣಿ ಅಪಘಾತ, ಓರ್ವ ಸಾವು

19102020 Kudligi Accident
Published on

ಕಾಗವಾಡ: ಬೆಳಗಾವಿ-ಸಾಂಗಲಿ ರಾಜ್ಯ ಹೆದ್ದಾರಿ ಮಾರ್ಗದ ಶಿರಗುಪ್ಪಿ- ಕಾಗವಾಡ ಗ್ರಾಮಗಳ ಮಧ್ಯೆ ಸೋಮವಾರ ರಾತ್ರಿ ಟ್ರ್ಯಾಕ್ಟರ್‌ಗೆ ಐಶರ್ ಟೆಂಪೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, 7 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಿರಜ್ ತಾಲೂಕಿನ ನರವಾಡ ಗ್ರಾಮದ ಐಶರ್ ಟೆಂಪೋ ಚಾಲಕ ಪರಶುರಾಮ ಮಾರುತಿ ಪಾಟೀಲ (34) ಮೃತಪಟ್ಟವರು. ಬೊಲೆರೋ ಚಾಲಕ ಮಕ್ಕಳಗೇರಿ ಗ್ರಾಮದ ಮಾಲಿಂಗ ದಾಸರ(53), ಬೈಕ್ ಸವಾರರಾದ ಶಿರಗುಪ್ಪಿ ಗ್ರಾಮದ ಸಮಜಿತ ಕರಂಬೆಲ, ಸುರೇಶ ಯಂಗಾರೆ ಹಾಗೂ ಟ್ರ್ಯಾಕ್ಟರ್‌ನಲ್ಲಿದ್ದ 4 ಜನ ಕೂಲಿ ಕಾರ್ಮಿಕರು ಸೇರಿ ಒಟ್ಟು 7 ಜನರಿಗೆ ಗಂಭೀರ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸೋಮವಾರ ಮಧ್ಯರಾತ್ರಿ ಕಾಗವಾಡದಿಂದ ಶಿರಗುಪ್ಪಿಗೆ ಕಬ್ಬು ಕಟಾವು ಮಾಡುವ 12 ಕೂಲಿಕಾರ್ಮಿಕರನ್ನು ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಬೆಳಗಾವಿಯಿಂದ ಕಾಗವಾಡದತ್ತ ಬರುತ್ತಿದ್ದ, ಟೆಂಪೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಇದೇ ಮಾರ್ಗದಿಂದ ಸಂಚರಿಸುತ್ತಿದ್ದ ಬೈಕ್ ಹಾಗೂ ಬೊಲೆರೋ ಜೀಪ್ ಕೂಡ ಸರಣಿ ಅಪಘಾತಕ್ಕೀಡಾಗಿವೆ.

ಕಾಗವಾಡ ಪಿ.ಎಸ್.ಐ. ಹನುಮಂತ ಧರ್ಮಟ್ಟಿ, ಪೋಲಿಸ್ ಸಿಬ್ಬಂದಿ ಕಾಡಪ್ಪ ಚಂದೂರೆ, ಎಸ್.ಬಿ.ಮುರಗೋಡ, ಎನ್.ಎಲ್.ಮೋಳೆ, ಟಿ.ಎ.ಸೋನಾವಣೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಕಾಗವಾಡ ಪೊಲೀಸ್ ಠಾಣೆಯ ಪಿಎಸ್‌ಐ ಹನುಮಂತ ಧರ್ಮಟ್ಟಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net