ಮೈಸೂರು: ನಗರದ ದಿವಾನ್ಸ್ ರಸ್ತೆಯಲ್ಲಿ ಮೆಡಿಕಲ್ಸ್ ಸ್ಟೋರ್‌ಗಳ ಸರಣಿ ಕಳ್ಳತನ ಮಾಡಿರುವ ಕಳ್ಳರು ಸುಮಾರು 9 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಬಿಸ್ಕತ್, ಕಾಯಿನ್, ನಗದು ದೋಚಿ ಪರಾರಿಯಾಗಿದೆ.
‘ಗೌಡ್ರು’ ವೆಟರ್ನರಿ ಮತ್ತು ಪೆಟ್ ಮೆಡಿಕಲ್ಸ್, ಶ್ರೀನಿವಾಸ ಮೆಡಿಕಲ್ಸ್‌ನಲ್ಲಿ ಕಳ್ಳತನವಾಗಿದೆ. ದಾಸೇಗೌಡ ಅವರಿಗೆ ಸೇರಿದ ‘ಗೌಡ್ರು’ ಮೆಡಿಕಲ್ಸ್‌ನಲ್ಲಿ ಮಾಲೀಕರು ವ್ಯವಹಾರದ ಉದ್ದೇಶಕ್ಕಾಗಿ ಕಂಪನಿಗಳು ನೀಡಿದ್ದ 55 ಗ್ರಾಂ ಚಿನ್ನದ ಬಿಸ್ಕತ್, 6 ಗ್ರಾಂ ತೂಕದ ಚಿನ್ನದ ನಾಣ್ಯಗಳು, 66 ಗ್ರಾಂ ತೂಕದ ಬೆಳ್ಳಿ ನಾಣ್ಯ, 1.80 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‌ನ ಚೆಕ್, ಎಟಿಎಂ ಕಾರ್ಡ್ ದೋಚಲಾಗಿದೆ. ಶ್ರೀನಿವಾಸ ಮೆಡಿಕಲ್ಸ್‌ನಲ್ಲಿ ಡಿವಿಆರ್ ಅನ್ನು ಕಳವು ಮಾಡಲಾಗಿದೆ ಎಂದು ಪೊಲೀಸ್ ದೂರು ನೀಡಲಾಗಿದೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.