ನೇಸರಗಿಯಲ್ಲಿ ಸರಣಿ ಕಳ್ಳತನ, 11.2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು

IMG-20231114-WA0003.jpg
Published on

ಬೆಳಗಾವಿ: ಬೈಲಹೊಂಗಲ ತಾಲೂಕಿನ ನೇಸರಗಿಯಲ್ಲಿ ಸೋಮವಾರ ಸರಣಿ ಕಳ್ಳತನ ನಡೆದಿದೆ. ದೀಪಾವಳಿ ಆಚರಣೆಗೆಂದು ಬೇರೆಕಡೆ ತೆರಳಿದ ಕುಟುಂಬಗಳ ಮನೆಗಳ‌ನ್ನು ಟಾರ್ಗೆಟ್ ಮಾಡಿದ ಕಳ್ಳರು, ಮನೆಗಳ ಬೀಗ ಮುರಿದು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ದೋಚಿದ್ದಾರೆ.

ಒಟ್ಟು ಆರು ಮನೆಗಳ ಕಳ್ಳತನವಾಗಿವೆ. ಕಿರಣ ಉತ್ತಮ ಮೇದಾರ ಅವರ ಮನೆಯಲ್ಲಿ 8.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಪ್ರಕಾಶ ಶಿವರುದ್ರಪ್ಪ ಹೊಸಮನೆ ಅವರ ಮನೆಯಲ್ಲಿದ್ದ 1.5 ಲಕ್ಷ ರೂ. ಚಿನ್ನಾಭರಣ ಹಾಗೂ ಡಾ. ಜಗದೀಶ ಗೆಜ್ಜಿ 1.30 ಲಕ್ಷ ರೂ. ಚಿನ್ನಾಭರಣಗಳನ್ನು ದೋಚಿ‌ ಕಳ್ಳರು ಪರಾರಿಯಾಗಿದ್ದಾರೆ. ಸಿದ್ದಪ್ಪ ಇಂಚಲ,

ನಿಂಗಯ್ಯ ಹಿರೇಮಠ ಅವರ ಮನೆಗಳೂ ಕಳ್ಳತನವಾಗಿದ್ದು ಎಷ್ಟು ಪ್ರಮಾಣದ ಚಿನ್ನಾಭರಣ ಕಳ್ಳತನವಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆದಿದೆ‌.

ಘಟನಾ ಸ್ಥಳಕ್ಕೆ ಡಿವೈಎಸ್ ಪಿ ರವಿ ನಾಯ್ಕ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೇಸರಗಿ ಸಿಪಿಐ ರಾಘವೇಂದ್ರ ಹವಾಲ್ದಾರ, ಪಿಎಸ್ ಐ ವೈ.ಎಲ್. ಸಿಗಿಹಲ್ಲಿ, ಪಿಎಸ್ ಐ ಮಲ್ಲಿಕಾರ್ಜುನ ಬಣದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net