ಹೊಳೆನರಸೀಪುರದಲ್ಲಿ ಸರಣಿ ಕಳ್ಳತನ

JUNE.. 3, HNP., FILE 1.
ಹೊಳೆನರಸೀಪುರ ಪಟ್ಟಣದ ಕೋಟೆ ಮುಖ್ಯ ರಸ್ತೆಯ ಶ್ರೀ ಮಾರಮ್ಮಗುಡಿಯ ಬೀಗ ಹೊಡೆದು ಹುಂಡಿಯನ್ನೇ ಕಳವು ಮಾಡಿದ್ದಾರೆ.
Published on

ಹೊಳೆನರಸೀಪುರ: ಪಟ್ಟಣದಲ್ಲಿ ಭಾನುವಾರ ರಾತ್ರಿ ಕಿರಾಣಿ ಅಂಗಡಿ, ನಂದಿನಿ ಹಾಲಿನ ಬೂತ್ ಹಾಗೂ ದೇವಾಲಯದಲ್ಲಿ ಸರಣಿ ಕಳ್ಳತನ ನಡೆದಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ.

ಪಟ್ಟಣದ ಹಾಸನ-ಮೈಸೂರು ಹೆದ್ದಾರಿ ಸಮೀಪ ಇರುವ ಬೀಲಿಕಲ್ ರಂಗನಾಥ ಟ್ರೇಡರ್ಸ್‌ ಅಂಗಡಿಯ ಬೀಗ ಮುರಿದು ಕಳ್ಳರು ಸಿಗರೇಟ್ ಬಂಡಲ್‌ಗಳು ಹಾಗೂ ಗಲ್ಲಾ ಪೆಟ್ಟಿಗೆಯಲ್ಲಿದ್ದ ನಗದು ಸೇರಿ ಸುಮಾರು 2.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಅರಕಲಗೂಡು ಹೆದ್ದಾರಿ ಪಕ್ಕದ ನಂದಿನಿ ಹಾಲಿನ ಬೂತ್‌ನ ಬೀಗ ಒಡೆದು ಗಲ್ಲಾ ಪೆಟ್ಟಿಗೆಯಲ್ಲಿದ್ದ 25 ಸಾವಿರ ರೂ. ಹಣ ದೋಚಿದ್ದಾರೆ. ಅಲ್ಲದೆ ಪಟ್ಟಣದ ಕೋಟೆ ಮುಖ್ಯರಸ್ತೆಯ ಶ್ರೀ ಮಾರಮ್ಮಗುಡಿಯ ಹುಂಡಿಯನ್ನೇ ಕಳವು ಮಾಡಿದ್ದಾರೆ. ಭಾನುವಾರ ರಾತ್ರಿ ಮೂರು ಕಡೆಗಳಲ್ಲಿ ಕಳ್ಳತನವಾಗಿರುವುದು ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net