

ಇಳಕಲ್ಲ (ಗ್ರಾ) : ನಗರದ ಚವ್ಹಾಣ ಪ್ಲಾಟ್‌ನಲ್ಲಿ ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಐದು ಮನೆಗಳಲ್ಲಿ ಕಳ್ಳತನವಾಗಿದೆ.
ಪ್ಲಾಟ್‌ನ ನಿವಾಸಿಗಳು ನಗರದ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ರಾತ್ರಿ 10 ಗಂಟೆಗೆ ಆರಂಭವಾದ ರಸಮಂಜರಿ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದರು. ಆ ಸಂದರ್ಭವನ್ನು ಬಳಸಿಕೊಂಡು ಐದು ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ. ಅದರಲ್ಲಿ ಪಲ್ಲೇದ, ತಂಗಡಗಿ ಮತ್ತು ತಳವಾರ ಮನೆಯಲ್ಲಿ ತಿಜೋರಿ ಒಡೆದು ಹಣ ಮತ್ತು ಬಂಗಾರ ದೋಚಿದ್ದಾರೆ. ಆದರೆ, ಇನ್ನುಳಿದ ಎರಡು ಮನೆಗಳಲ್ಲಿ ಕಳ್ಳರಿಗೆ ಏನೂ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದ ತಕ್ಷಣ ಪೊಲೀಸರು ರಾತ್ರಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಹಾಗೂ ಗುರುವಾರ ಬೆಳಗ್ಗೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳದವರು ಭೇಟಿ ನೀಡಿ ಪರಿಶೀಲಿಸಿದರು.