ದೊಡ್ಡಬಳ್ಳಾಪುರದಲ್ಲಿ ಸರಣಿ ಕಳ್ಳತನ, 4 ಅಂಗಡಿಗಳ ಶೆಲ್ಟರ್ ಮರಿದು ಕಳವು

4dbp5 new photo
Published on

ದೊಡ್ಡಬಳ್ಳಾಪುರ: ಪಟ್ಟಣದ ವಿವಿಧೆಡೆ ಮನೆಗಳಲ್ಲಿ ಕಳ್ಳತನ ಹಾಗೂ ಅಂಗಡಿಗಳ ಸರಣಿ ಕಳ್ಳತನ ಪ್ರಕರಣಗಳು ವರದಿಯಾಗಿವೆ.

ಮಂಗಳವಾರ ರಾತ್ರಿ ನಗರದ ಬಸವೇಶ್ವರ ನಗರದಲ್ಲಿನ ರಾಜಣ್ಣ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಬುಧವಾರ ರಾತ್ರಿ ನಗರದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ 4 ಅಂಗಡಿಗಳ ಶೆಲ್ಟರ್ ಮರಿದು ಕಳವು ಮಾಡಿದ್ದಾರೆ.

ಔಷಧ ಅಂಗಡಿ, ಕೃಷಿ ಪರಿಕರ ಹಾಗೂ ರಾಸಾಯನಿಕ ಮಾರಾಟ ಮಳಿಗೆ, ಖಾಸಗಿ ಕಚೇರಿಯಲ್ಲಿ ಕಳವು ನಡೆದಿದೆ. ಅಂಗಡಿಗಳಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಫೈಲ್‌ಗಳು, ಔಷಧ ಅಂಗಡಿಯಲ್ಲಿದ್ದ ಸುಮಾರು ಒಂದೂವರೆ ಲಕ್ಷ ರೂ. ನಗದು, ಮೆಡಿಕಲ್ ಸ್ಟೋರ್ ನಲ್ಲಿದ್ದ ಮೂವತ್ತು ಸಾವಿರ ನಗದು ಕಳ್ಳತನವಾಗಿದೆ ಎನ್ನಲಾಗಿದೆ.

ನಗರ ಠಾಣೆ ಹಾಗೂ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net