ಉಗಾರದಲ್ಲಿ ಸರಣಿ ಮನೆ ಕಳ್ಳತನ

6Kagavad1 CRIME
Published on

ಕಾಗವಾಡ: ತಾಲೂಕಿನ ಉಗಾರ ಖುರ್ದ ಪಟ್ಟಣದ ಎರಡು ಮನೆಗಳಲ್ಲಿ ಮಂಗಳವಾರ ನಸುಕಿನ ಜಾವ ಬಾಗಿಲು ಮುರಿದು ನಗನಾಣ್ಯ ದೋಚಿ ಪರಾರಿಯಾದ ಟನೆ ನಡೆದಿದೆ.

ಪಟ್ಟಣದ ವೈಶಾಲಿ ಪ್ರವಿಣ ಶೆಟ್ಟಿ ಅವರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋದಾಗ ಮನೆ ಬೀಗ ಮುರಿದು 50 ಸಾವಿರ ರೂ. ಹಾಗೂ 60 ಗ್ರಾಂ ಬೆಳ್ಳಿ ಹಾಗೂ ತೋಪಿಕ ಮುಲ್ಲಾ ಅವರು ಮನೆಯ ಮಹಡಿ ಮೇಲೆ ಮಲಗಿದ್ದಾಗ ಕಳ್ಳರು ಕೆಳಗಡೆ ಮನೆಯ ಬಾಗಿಲು ಮುರಿದು 25 ಸಾವಿರ ರೂ. ಹಾಗೂ 8 ಗ್ರಾಂ ಚಿನ್ನ ಕಳವು ಮಾಡಿದ್ದಾರೆ.

ಅದರಂತೆ ಕಲ್ಲಪ್ಪ ಅಕ್ಕಿ ಅವರ ಮನೆಯ ಮೇಲಿನ ಹಂಚು ತೆಗೆದು ಟೇಜೂರಿ ಕೀ ಮುರಿದು ಜಾಲಾಡಿದ್ದಾರೆ. ಆದರೆ, ಏನು ಸಿಗದೆ ಮರಳಿ ಹೋಗಿದ್ದಾರೆ. ಸ್ಥಳಕ್ಕೆ ಕಾಗವಾಡ ಠಾಣೆಯ ಪಿಎಸ್​ಐ ರಾವೇಂದ್ರ ಖೋತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗಾವಿಯಿಂದ ಬೆರಳಚ್ಚು ತರು ಹಾಗೂ ಶ್ವಾನದಳ ತಂಡ ಆಗಮಿಸಿ ಶೋಧ ನಡೆಸಿತು. ಕಳ್ಳತನ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಾಗವಾಡ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net