ಜಮಖಂಡಿಯಲ್ಲಿ ಮನೆಗಳ ಸರಣಿ ಕಳ್ಳತನ

Serial burglary of houses in Jamkhandi
Serial burglary of houses in Jamkhandi
Published on

ಜಮಖಂಡಿ: ನಗರದಲ್ಲಿ ತಡರಾತ್ರಿ ಐದು ಮನೆಗಳು, ಒಂದು ಕಿರಾಣಿ ಅಂಗಡಿ ಸಮೇತ ಸರಣಿ ಕಳ್ಳತನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅರ್ಪತ ಕಾಲನಿಯ ನಿವಾಸಿಗಳಾದ ಫಾರೂಕ ಸಲೀಮ ಪಟೇಲ್ ಅವರ ಮನೆಯಲ್ಲಿ ಅರ್ಧ ತೊಲೆ ಬಂಗಾರದ ಆಭರಣ, ಲಕ್ಷ್ಮಣ ರಾಜಪ್ಪ ಭಜಂತ್ರಿ, ಕಲ್ಲಪ್ಪ ಭಜಂತ್ರಿ, ಶಬಾನ ಗಣಿ ಸಗರ, ಯೂನಸ್ ಮಹ್ಮದ ಶೇಖ, ಅಲ್ಲಮ್ಮಪ್ರಭು ಸಂಗಪ್ಪ ಉಪ್ಪಿನ ಅವರ ಮನೆಗಳಲ್ಲಿ ಸರಣಿ ಕಳ್ಳತನವಾಗಿದೆ.

ದಾನಮ್ಮ ಬಡಾವಣೆಯ ಉಪ್ಪಿನ ಅವರ ಕಿರಾಣಿ ಅಂಗಡಿಯ ಮೇಲಿನ ಪತ್ರಾಸ ಕತ್ತರಿಸಿ ಒಳಗೆ ನುಗ್ಗಿ ಚಿಲ್ಲರೆ ಕಾಸು ಹಾಗೂ ಆರ್‌ಎಮ್‌ಡಿ ಗುಟ್ಕಾ ಪ್ಯಾಕೇಟ್ ಕದ್ದಿದ್ದಾರೆ.

ಈ ಕುರಿತು ಶಹರ ಪೋಲಿಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net