ಮುಡಿಗುಂಡ ಬಳಿ ಸರಣಿ ಅಪಘಾತ

Accident
Published on

ಕೊಳ್ಳೇಗಾಲ: ತಾಲೂಕಿನ ಮುಡಿಗುಂಡ ರೇಷ್ಮೆ ಕೃಷಿ ಮಾರುಕಟ್ಟೆ ಮುಂಭಾಗ ಬುಧವಾರ ಸರಣಿ ಅಪಘಾತ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮುಡಿಗುಂಡ ಬಳಿ ಸಂಚರಿಸುತ್ತಿದ್ದ ಕಾರಿಗೆ ಅಡ್ಡಲಾಗಿ ಹಸು ಬಂದಿದ್ದು, ಕೂಡಲೇ ಕಾರಿನ ಚಾಲಕ ಬ್ರೇಕ್ ಹಾಕಿದ್ದಾರೆ. ಪರಿಣಾಮ ಹಿಂದೆ ಬರುತ್ತಿದ್ದ ಮತ್ತೊಂದು ಕಾರು ಡಿಕ್ಕಿ ಹೊಡಿದಿದೆ. ಈ ಎರಡೂ ಕಾರಿನ ಹಿಂದೆ ಬಂದ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಮುಂದಿನ ಹೋಗುತ್ತಿದ್ದ ಕಾರ್‌ಗೆ ಗುದ್ದಿದ್ದು ಸರಣಿ ಅಪಘಾತ ಸಂಭವಿಸಿದೆ. ಇನ್ನು ಅಪಘಾತದಲ್ಲಿ ಕಾರುಗಳು ಜಖಂಗೊಂಡಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net