

ಕುಣಿಗಲ್: ತಾಲೂಕಿನ ಇಟ್ಟಿಗೆ ಕಾರ್ಖಾನೆಯಲ್ಲಿ ಮೂರು ವರ್ಷಗಳಿಂದ ಜೀತ ಮಾಡುತ್ತಿದ್ದ ಸಂತ್ರಸ್ತ ಕುಟುಂಬಕ್ಕೆ ಕುಣಿಗಲ್ ತಾಲೂಕು ಆಡಳಿತದಿಂದ ಬುಧವಾರ ಜೀತಮುಕ್ತ ದೃಢೀಕರಣ ಪತ್ರವನ್ನು ತಹಸೀಲ್ದಾರ್ ಯು.ರಶ್ಮಿ ನೀಡಿದರು.
ತಾಲೂಕು ಆಡಳಿತಸೌಧದಲ್ಲಿ ರಾಜೇಂದ್ರ ದಂಪತಿಗೆ ಪತ್ರ ನೀಡಿ ಮಾತನಾಡಿದ ಯು.ರಶ್ಮಿ, ತಾಲೂಕು ಆಡಳಿತ ನೀಡಿರುವ ಜೀತಮುಕ್ತ ದೃಢೀಕರಣ ಪತ್ರವನ್ನು ರಾಜೇಂದ್ರ ದಂಪತಿಯು ಸ್ವಗ್ರಾಮದಲ್ಲಿನ ಆಡಳಿತಕ್ಕೆ ತೋರಿಸಿದರೆ, ಸರ್ಕಾರದಿಂದ ಸೌಲಭ್ಯ ಪಡೆಯಬಹುದು. ಜತೆಗೆ ತಲಾ 30 ಸಾವಿರ ರೂ. ಗಳಂತೆ 90 ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದಲೂ ಸಹಾಯಧನ ನೀಡಲಾಗುವುದು. ಅಲ್ಲದೇ ರಾಜೇಂದ್ರ ಅವರು ಸ್ವಗ್ರಾಮಕ್ಕೆ ಹೋಗುವವರೆಗೂ ತಾಲೂಕು ಆಡಳಿತ ಜವಾಬ್ದಾರಿ ವಹಿಸಿಕೊಳ್ಳುತ್ತದೆ ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ತಾಲೂಕು ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ಮುಕ್ತಿ ಒಕ್ಕೂಟದ ಬೃಂದಾ ಇದ್ದರು.ಘಿ
ಠಾಣೆಯಲ್ಲಿ ದೂರು
ಜೀತಕ್ಕಿದ್ದ ಕುಟುಂಬದವರು ದಲಿತ ಸಮುದಾಯದವರಾಗಿದ್ದು, ಪ.ಜಾತಿ, ಪ.ಪಂಗಡ ಅನುಸೂಚಿತ ಬುಡಕಟ್ಟುಗಳ(ದೌರ್ಜನ್ಯ) ತಡೆ, ಎಸ್ಎಸ್ಟಿ ಆ್ಯಕ್ಟ್ ಮತ್ತು ಜೀತಪದ್ಧತಿ, ಜೀತದಾಳು ವ್ಯವಸ್ಥೆ ನಿಷೇದ ಕಾಯ್ದೆ, ಬಾಲ ಕಾರ್ಮಿಕ ತಡೆ ಕಾಯ್ದೆಯಡಿ ಇಟ್ಟಿಗೆ ಕಾರ್ಖಾನೆ ಮಾಲೀಕ ವೇಣುಗೋಪಾಲ್ ವಿರುದ್ಧ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಹಸೀಲ್ದಾರ್ ಹೇಳಿದರು.
ಏನಿದು ಪ್ರಕರಣ?
ತಾಲೂಕಿನ ಹುಲಿಯೂರುದುರ್ಗ ಹೋಬಳಿ ಬೀರಗಾನಹಳ್ಳಿಯ ಇಟ್ಟಿಗೆ ಕಾರ್ಖಾನೆ ಮಾಲೀಕರ ಬಳಿ ಒಂದು ಸಾವಿರ ಇಟ್ಟಿಗೆ ತಯಾರಿಕೆಗೆ ಸಾವಿರ ರೂ.ನಂತೆ ಕೂಲಿ ನಿಗದಿಪಡಿಸಿಕೊಂಡು ದಾವಣಗೆರೆ ಜಿಲ್ಲೆಯ ಚೀಲೂರು ಗ್ರಾಮದ ರಾಜೇಂದ್ರ ದಂಪತಿಯು ಅಪ್ರಾಪ್ತ ಮಗನೊಂದಿಗೆ ದುಡಿಯುತ್ತಿದ್ದರು. ಮುಂಗಡ ಹಣ ತೀರಿಸಿಕೊಳ್ಳಲು ದಿನದ 12 ಗಂಟೆಯಲ್ಲದೆ ರಜಾದಿನಗಳಲ್ಲಿಯೂ ಮಾಲೀಕರು ದುಡಿಸಿಕೊಳ್ಳುತ್ತಿದ್ದರು. ಅಲ್ಲದೇ ಇಟ್ಟಿಗೆ ಕಾರ್ಖಾನೆಯಿಂದ ಹೊರಗೆ ಹೋಗಲು ಅನುಮತಿ ಸಹ ನೀಡಿರಲಿಲ್ಲ. ದಂಪತಿಗೆ ನೀಡಿದ್ದ ಕೊಠಡಿ ವಾಸಕ್ಕೆ ಯೋಗ್ಯವಾಗಿರಲಿಲ್ಲ. ಕೂಲಿ ನೀಡದೆ, ಸ್ವಂತ ಊರಿಗೆ ಹೋಗಲೂ ಅವಕಾಶ ಮಾಡಿಕೊಡದೆ ಕಾರ್ಖಾನೆ ಮಾಲೀಕರು ದೃಹಿಕ ಹಲ್ಲೆ ಮಾಡುತ್ತಿದ್ದರು. ಈ ಸಂಬಂಧ ಜೀತಮುಕ್ತ ಎನ್ಜಿಒ ಸಂಚಾಲಕರು ನೀಡಿದ ಮಾಹಿತಿಯೊಂದಿಗೆ ಮೇ 19ರಂದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಕಾರ್ಮಿಕ ಅಧಿಕಾರಿ, ಆರಕ ನಿರೀಕರ ತಂಡ ಬೀರಗೋನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಸ.ನಂ.10/5ರಲ್ಲಿನ ಬಿಆರ್ವಿ ಇಟ್ಟಿಗೆ ಕಾರ್ಖಾನೆ ಪರಿಶೀಲಿಸಿ ರಾಜೇಂದ್ರ ಹಾಗೂ ಲಲಿತಾ ಕುಟುಂಬವನ್ನು ರಸಿತ್ತು.