ಭಗವಂತನ ಸೇವೆಯಿಂದ ನೆಮ್ಮದಿ ಸಾಧ್ಯ

14 nrp 2 (2)
ಎನ್.ಆರ್.ಪುರದ ಶ್ರೀ ಗಾಯಿತ್ರಿ ದೇವಸ್ಥಾನಕ್ಕೆ ಬೆಲಗೂರು ವಿಜಯ ಮಾರುತಿ ಸ್ವಾಮೀಜಿಗಳಿಗೆ ತಾಲೂಕು ಬ್ರಾಹ್ಮಣ ಮಹಾ ಸಭಾದಿಂದ ಲ ಸಮರ್ಪಣೆ ಮಾಡಲಾಯಿತು. ಅನಂತಪದ್ಮನಾಭ, ಕೊನೋಡಿ ಗಣೇಶ್, ಸುರೇಶ್ ಇದ್ದರು.
Published on

ಎನ್.ಆರ್.ಪುರ: ಪ್ರತಿಯೊಬ್ಬರೂ ಸಂಧ್ಯಾ ವಂದನೆ, ಗಾಯಿತ್ರಿ ಉಪಾಸನೆ ಮಾಡಬೇಕು ಎಂದು ಬೆಲಗೂರು ಕ್ಷೇತ್ರದ ಶ್ರೀ ಮಾರುತಿ ಪೀಠದ ವಿಜಯ ಮಾರುತಿ ಸ್ವಾಮೀಜಿ ಹೇಳಿದರು.
ಅಗ್ರಹಾರದ ಗಾಯಿತ್ರಿ ದೇವಸ್ಥಾನದಲ್ಲಿ ಆಶೀರ್ವಚನ ನೀಡಿದ ಅವರು, ಗಾಯಿತ್ರಿ ಉಪಾಸನೆ ಮಾಡುವುದರಿಂದ ಹಿಂದಿನ ಪಾಪಗಳು ಕಳೆದು ಪುಣ್ಯ ದೊರೆಯಲಿದೆ. ಪ್ರಸ್ತುತ ನಾವು ಸುಖವಾಗಿರಲು ಅದಕ್ಕೆ ಪರಮಾತ್ಮನ ಅನುಗ್ರಹ ಕಾರಣ. ಮನುಷ್ಯ ಜನ್ಮ ಸದುಪಯೋಗ ಪಡೆದುಕೊಳ್ಳಲು ಋಷಿ ಮುನಿಗಳು, ಮಹರ್ಷಿಗಳು ಶಾಸ್ತ್ರದ ಮೂಲಕ ನೀತಿ, ನಿಯಮಗಳನ್ನು ಹೇಳಿದ್ದಾರೆ. ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಭಗವಂತನ ಸೇವೆ ಮಾಡಬೇಕು ಎಂದು ಹೇಳಿದರು.
ಈ ಜಗತ್ತಿನಲ್ಲಿ ಸಂಪತ್ತು ಸಂಪಾದನೆ ಮಾಡಿದರೆ ಐಶ್ವರ್ಯ ಸಿಕ್ಕಿದಂತೆ ಎಂದು ಹಲವರು ಭಾವಿಸುತ್ತಾರೆ. ಆದರೆ ಸಂಪತ್ತು ನೈಜವಾದ ಶ್ರೀಮಂತಿಕೆಯಲ್ಲ. ಅದು ಶಾಶ್ವತ ಮುಕ್ತಿ ಕೊಡುವುದಿಲ್ಲ. ಅಂತಹ ಶ್ರೀಮಂತಿಕೆ ಕ್ಷಣಿಕವಾಗಿದೆ. ನಾವು ಧರ್ಮದ ಮಾರ್ಗದಲ್ಲಿ ನಡೆದು ಪ್ರತಿಯೊಬ್ಬರಿಗೂ ಒಳಿತು ಬಯಸಬೇಕು ಎಂದರು.
ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷ ಅನಂತ ಪದ್ಮನಾಭ ಮಾತನಾಡಿ, ಬೆಲಗೂರು ಶ್ರೀಗಳು ಗಾಯಿತ್ರಿ ದೇವಸ್ಥಾನದ ಮಂಡಲ ಪೂಜೆ ಬರಬೇಕಾಗಿತ್ತು. ಕಾರಣಾಂತರದಿಂದ ಬಂದಿರಲಿಲ್ಲ. ಇಂದು ಆಗಮಿಸಿರುವುದು ಭಕ್ತರಿಗೆ ಸಂತಸ ತಂದಿದೆ. ಬೆಲಗೂರು ಮಾರುತಿ ಪೀಠದ ಹಿಂದಿನ ಅವಧೂತರಾದ ಬಿಂದು ಮಾಧವ ಶರ್ಮ ಅವರು 2013ರಲ್ಲಿ ಕೋಟಿ ರುದ್ರ ಹೋಮ ನಡೆಸಿದ್ದಾರೆ. ವಿಶ್ವದಲ್ಲೇ ಕೋಟಿ ರುದ್ರಹೋಮ ಮಾಡಿರುವುದು ಬೆಲಗೂರು ಪೀಠದಲ್ಲಿ ಮಾತ್ರ ಎಂದರು.
ತಾಲೂಕು ಬ್ರಾಹ್ಮಣ ಮಹಾ ಸಭಾದಿಂದ ಬೆಲಗೂರು ವಿಜಯ ಮಾರುತಿ ಸ್ವಾಮೀಜಿಗಳಿಗೆ ಲ ಸಮರ್ಪಣೆ ಮಾಡಲಾಯಿತು. ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಗಾಯಿತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ತಾಲೂಕು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಕೊನೋಡಿ ಗಣೇಶ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಅಭಿಷೇಕ್, ಉಪಾಧ್ಯಕ್ಷೆ ಅನ್ನಪೂರ್ಣ ಗೋಪಾಲಕೃಷ್ಣ , ತಾಲೂಕು ಬ್ರಾಹ್ಮಣ ಮಹಾ ಸಭಾದ ನಿಕಟಪೂರ್ವ ಅಧ್ಯಕ್ಷ ಸದಾಶಿವ ಭಟ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net