ಕಾಲೇಜಿನಲ್ಲಿ ಸಂಕ್ರಾಂತಿ ಸುಗ್ಗಿ ಸಂಭ್ರಮ

JANUA., 14, HNP., Ph.1.
Published on

ಹೊಳೆನರಸೀಪುರ: ಪಟ್ಟಣದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಸಂಕ್ರಾಂತಿ ಸುಗ್ಗಿ ಸಂಭ್ರಮ ಆಯೋಜಿಸಲಾಗಿತ್ತು.

ಜೋಡಿ ಎತ್ತುಗಳ ಗಾಡಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ, ಭಾರತೀಯ ಸಂಸ್ಕೃತಿಯಲ್ಲಿ ಹಳ್ಳಿ ಸೊಗಡಿನ ಹಬ್ಬಗಳು ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇಂದಿನ ಯುವ ಸಮೂಹಕ್ಕೆ ಸಂಸ್ಕೃತಿ ಹಾಗೂ ಪರಂಪರೆಯನ್ನು ತಿಳಿಸಿಕೊಡಬೇಕಾದ ಅಗತ್ಯವಿದೆ ಎಂದರು.

ಪ್ರಾಂಶುಪಾಲೆ ಲಲಿತಾದೇವಿ, ಉಪನ್ಯಾಸಕರಾದ ದಿನೇಶ್, ಕನ್ನಡ ವಿಭಾಗದ ಆಶಾ, ಮನಶಾಸ್ತ್ರ ವಿಭಾಗದ ಆಶಾ, ಸುಮಾ, ಸುನಿತಾ, ನಂದಕುಮಾರ್, ತಿಪ್ಪೇಸ್ವಾಮಿ, ಅನಂತ, ಗೋಲಕುಂಡಿ, ಹರ್ಷವರ್ಧನ್, ಶಿವಕುಮಾರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net