

ಆನೇಕಲ್ : ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಬುಕ್ಕಸಾಗರ ಗ್ರಾಮದಲ್ಲಿ ವೈಫೈ ಕನೆನ್ ಸರ್ಚಿಂಗ್ ವೇಳೆ ಪಾಕಿಸ್ತಾನ್ ಪರ, ದೇಶ ವಿರೋಧಿ
ಯೂಸರ್ ಐಡಿ ಪತ್ತೆಯಾಗಿದೆ. ತಾಲೂಕಿನ ಬೆಂಗಳೂರು ದಣ ವಿಧಾನಸಭಾ ೇತ್ರದ ಜಿಗಣಿಯ ಬುಕ್ಕಸಾಗರ ಕೋ ಆಪರೇಟಿವ್ ಬ್ಯಾಂಕ್ನ ವೈೈನಲ್ಲಿ ಸಮಸ್ಯೆ ಉಂಟಾಗಿ, ಸರ್ವೀಸ್ಗೆ ಸ್ಥಳಿಯ ಮುಸ್ಲಿಂ ವ್ಯಕ್ತಿಯೊಬ್ಬನಿಗೆನೀಡಲಾಗಿತ್ತು. ರಿಪೇರಿಯಾದಾಗಿನಿಂದಲೂ ವೈೈ ಕನೆಕ್ಷನ್ನಲ್ಲಿ ಈ ರೀತಿ ತೋರಿಸುತ್ತಿದೆ ಎನ್ನಲಾಗಿದೆ.
ಕೆಲವರು ಮೊಬೈಲ್ ವೈಫೈ ಕನೆನ್ ಸರ್ಚಿಂಗ್ ವೇಳೆ ಪಾಕಿಸ್ತಾನ ಪರ ಘೋಷಣೆಯ ಯೂಸರ್ ಐಡಿ ಹೆಸರು ತೋರಿಸಿದೆ. ಇದನ್ನು ಕಂಡು ಕಂಗಾಲಾದ ಇಲ್ಲಿನ ಜನ ಕೂಡಲೇ ಜಿಗಣಿ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಇನ್ಸ್ಪೆಕ್ಟರ್ ಮಂಜುನಾಥ್, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದಾಗ ಕೋ ಆಪರೇಟಿವ್ ಬ್ಯಾಂಕ್ನ ವೈಫೈ ರೂಟರ್ನಿಂದಲೇ ಈ ರೀತಿ ಬರುವುದು ಗೊತ್ತಾಗಿದೆ. ಕಚೇರಿಯ ಸಿಬ್ಬಂದಿಯನ್ನು ಠಾಣೆಗೆ ಕರೆಸಿ ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಕಾರ್ಯಕರ್ತರು ಈ ಬಗ್ಗೆ ದೂರು ದಾಖಲಿಸಿದ್ದು, ಎನ್ಸಿಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕಾರ್ಯ ಕೈಗೊಂಡಿದ್ದಾರೆ. ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಕರೆ ಮಾಡಿದರೆ ಆತನ ಫೋನ್ ಸ್ವಿಚ್ ಆಫ್ ಆಗಿದೆ.
ಯುವಕನೊಬ್ಬನ ಮೇಲೆ ಅನುಮಾನ : ಪ್ರಾಥಮಿಕ ತನಿಖೆಯಲ್ಲಿ ಸ್ಥಳಿಯ ಯುವಕನೊಬ್ಬನ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು,ಆತನ ಹಿನ್ನೆಲೆ ಕಲೆ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.