

Quality foods company : ಭಾರತೀಯ ಪಾರಂಪರಿಕ ಅಡುಗೆ ರುಚಿಯ ಗುಟ್ಟನ್ನು ಆಧುನಿಕ ಶೈಲಿಯಲ್ಲಿ ಪ್ರಸ್ತುತಪಡಿಸುತ್ತಿರುವ ಕ್ವಾಲಿಟಿ ಫುಡ್ಸ್ ಕಂಪನಿಯಿಂದ ಇಡ್ಲಿ ಮತ್ತು ಅನ್ನಕಾಗಿ ಪ್ರತ್ಯೇಕ ಸಾಂಬಾರ್ ಮಸಾಲೆ ಗ್ರಾಹಕರಿಗೆ ಪರಿಚಯಿಸಿದೆ.
ಕ್ವಾಲಿಟಿ ಫುಡ್ಸ್ನ ರಾಯಭಾರಿಯಾಗಿ ನಟ ‘ಸಿಹಿಕಹಿ’ ಚಂದ್ರು ಅವರನ್ನು ನೇಮಕ ಮಾಡಿಕೊಂಡಿದೆ. ಇಡ್ಲಿ ಉತ್ತಮ ರುಚಿಯ ಆಸ್ವಾದನೆಗೆ, ವಿಶಿಷ್ಟ ರುಚಿಯ ಸಾಂಬಾರ್ ಅಗತ್ಯವಿದೆ. ಮಾರುಕಟ್ಟೆಯಲ್ಲಿ ಇಡ್ಲಿ- ಸಾಂಬಾರ್ ಎಂದು ಪ್ರತ್ಯೇಕ ಸಾಂಬಾರ್ ಪುಡಿ ಇಲ್ಲ. ಈ ಕೊರತೆ ನೀಗಿಸಲು ಕ್ವಾಲಿಟಿ ಫುಡ್ಸ್ ಮೊದಲ ಬಾರಿಗೆ ಎರಡು ವಿಭಿನ್ನ ಸಾಂಬಾರ್ ಮಸಾಲೆಗಳನ್ನು ತಯಾರಿಸಿದೆ.
ಕ್ವಾಲಿಟಿ ಇಡ್ಲಿ ಸಾಂಬಾರ್ ಪೌಡರ್ ತಿಳಿಯಾದ, ಪರಿಮಳಭರಿತವಾದ, ಸಿಹಿ, ಉಪ್ಪು ಮತ್ತು ಖಾರದ ಸೂಕ್ಷ್ಮ ಸಂಯೋಜನೆ ಹೊಂದಿರುವ ವಿಶೇಷ ರೆಸಿಪಿ ಹೊಂದಿದೆ. ಕ್ವಾಲಿಟಿ ರೈಸ್- ಸಾಂಬಾರ್ ಪೌಡರ್ನಲ್ಲಿ ಅನ್ನದ ಜೊತೆಗೆ ತಿನ್ನಲು ಹೆಚ್ಚು ಮಂದವಾದ ಗಾಢವಾದ, ಮನ ಮೆಚ್ಚಿಸುವ ರುಚಿಯ ಪಾಕಕಲೆ ಇದರಲ್ಲಿ ಜೀವಂತವಾಗಿದೆ ಎಂದು ಕ್ವಾಲಿಟಿ ಫುಡ್ಸ್ ಕಂಪನಿ ತಿಳಿಸಿದೆ.
ಭಾರತೀಯ ಅಡುಗೆ ಮನೆಯ ನಾಡಿಮಿಡಿತ ವನ್ನು ಸದಾ ಆಲಿಸುತ್ತೇವೆ. ಹೊಸ ಆವಿಷ್ಕಾರ ಅಳವಡಿಸಿಕೊಳ್ಳುತ್ತಾ ಮನೆಯೂಟದ ಸವಿ ಯನ್ನು ನಿರಂತರವಾಗಿ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನರೇಶ್ ಪಗಾರಿಯಾ ತಿಳಿಸಿದ್ದಾರೆ. ಭಾರತದಲ್ಲಿ ಅಡುಗೆ ಅಂದರೆ ಕೇವಲ ಆಹಾರ ಅಲ್ಲ. ಇದು ಭಾವನೆಗಳನ್ನು ಮತ್ತು ಸವಿ ನೆನಪುಗಳನ್ನು ಪ್ರಚೋದಿಸುವ ಅನುಭವ. ಎರಡು ವಿಭಿನ್ನ ಸಾಂಬಾರ್ ಮಸಾಲೆಗಳ ಮೂಲಕ ಅಮ್ಮ ಅಥವಾ ಅಜ್ಜಿಯ ನೆನಪಿಸಲಿವೆ ಎಂದು ಸಂಸ್ಥೆಯ ನಿರ್ದೇಶಕ ಧೀರಜ್ ಜೈನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.