

ನಿಪ್ಪಾಣಿ: ನಾಗಮೋಹನದಾಸ ವರದಿ ಆಧಾರದ ಮೇಲೆ ೬೩ ಜಾತಿಗೆ ಶೇ.೫ ಒಳಮೀಸಲಾತಿ ನೀಡಿದ್ದು, ಇದರಿಂದ ಭೋವಿ (ವಡ್ಡರ), ಬಂದಾರ, ಕೊರಮ, ಕೊರಚ ಮೊದಲಾದ ಒಟ್ಟು ೬೩ ಜಾತಿಗೆ ಅನ್ಯಾಯವಾಗಿದೆ. ಆದ್ದರಿಂದ ಸ್ಪರ್ಶ ಜಾತಿಗೆ ಸೇರಿಸಿ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಭೋವಿ, ವಡ್ಡರ ಸಮುದಾಯದ ತಾಲೂಕಾಧ್ಯಕ್ಷ ದತ್ತಾ ಜೋತ್ರೆ ಆಗ್ರಹಿಸಿದರು.
ನಗರದಲ್ಲಿ ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಕ್ರಾಂತಿ ಹಾಗೂ ತಾಲೂಕು ಭೋವಿ (ವಡ್ಡರ) ಸಮುದಾಯದಿಂದ ತಹಸೀಲ್ದಾರ್ ಮುಜಪ್ಪರ್ ಬಳಿಗಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದರು.
ನಾಗಮೋಹನದಾಸ ವರದಿಯಲ್ಲಿ ಭೋವಿ (ವಡ್ಡರ) ಸಮುದಾಯ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಸಮುದಾಯವನ್ನು ಬೇರ್ಪಡಿಸಿ ಪ್ರತ್ಯೇಕ ಶೇ.೨ ಮೀಸಲಾತಿ ಜಾರಿ ಮಾಡಿಕೊಡಬೇಕೆಂದು ಆಗ್ರಹಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಗಾಡಿವಡ್ಡರ ಮಾತನಾಡಿ, ಭೋವಿ (ವಡ್ಡರ) ಸಮುದಾಯ ತೀರ ಹಿಂದುಳಿದಿದೆ. ಹಾಗಾಗಿ ವರದಿ ಪುನಃ ಪರಿಶೀಲಿಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯ ರಾಜೇಂದ್ರ ವಡ್ಡರ ಮಾತನಾಡಿದರು. ಮನೋಹರ ಮಾತಿವಡ್ಡರ, ಮಹಾದೇವ ಮಾತಿವಡ್ಡರ, ಅನಿಲ ಮಾತಿವಡ್ಡರ, ಅಣ್ಣಾರಾವ ಕಲಕುಟಗಿ, ಚನ್ನಪ್ಪ ಕಲಕುಟಗಿ, ಚಂದ್ರಕಾAತ ಮಾತಿವಡ್ಡರ ಇತರರು ಇದ್ದರು.