ವಕ್ಫ್ ಬೋರ್ಡ್, ಅರಣ್ಯ ಇಲಾಖೆಗೆ ಪ್ರತ್ಯೇಕ ಕಾನೂನು

ex minister haratalu halappa
ಮಾಜಿ ಸಚಿವ ಹರತಾಳು ಹಾಲಪ್ಪ
Published on

ಶಿವಮೊಗ್ಗ: ರಾಜ್ಯದಲ್ಲಿ ವಕ್ಫ್ ಬೋರ್ಡ್ ಮತ್ತು ಅರಣ್ಯ ಇಲಾಖೆಗೆ ಪ್ರತ್ಯೇಕ ಕಾನೂನು ಇದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಕಿಡಿಕಾರಿದರು.

ಹೊಳೆಹೊನ್ನೂರು ರಸ್ತೆ ಶ್ರೀಗಂಧ ಕೋಠಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಶುಕ್ರವಾರ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು,ರೈತರದ್ದು ನೂರಾರು ಕಷ್ಟಗಳಿವೆ. ಅದರ ಜತೆಗೆ ಸರ್ಕಾರವೂ ತೊಂದರೆ ಕೊಡುತ್ತಿದೆ. ಕಾಲಕಾಲಕ್ಕೆ ಗಮನಕ್ಕೆ ತಂದರೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅವರ ಬಳಿ ಯಾವ ಪೇಪರ್ ಕೂಡ ಇಲ್ಲ. ಆದರೆ ಅವರು ಕೇಳುವ ದಾಖಲೆ ಒದಗಿಸಲು ಆಗುತ್ತಿಲ್ಲ. ಹಿಡಿತಕ್ಕೂ ಸಿಗುತ್ತಿಲ್ಲ. ಬಡಿತಕ್ಕೆ ಮಾತ್ರ ಅರಣ್ಯ ಇಲಾಖೆ ಸ್ಪಲ್ಪ ಸಿಗುತ್ತದೆ. ಒಟ್ಟಾರೆ ಆನೆಗಳ ಸ್ಥಳಾಂತರ ಮಾಡಬೇಕು ಎಂದರು.

ಹಾಸನ, ಕೊಡಗು, ಸಕಲೇಶಪುರ, ಬೆಂಗಳೂರು ಸುತ್ತಮುತ್ತ ಆನೆಗಳ ಆವಾಸ ಸ್ಥಾನವಾಗಿದ್ದು ಆನೆಗಳು ವಾಸ ಮಾಡುವ ಸ್ಥಳ ಇದಲ್ಲ. ಇದನು ಮನಗಂಡು ಸ್ಥಳಾಂತರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net