ಕಸವನ್ನು ಮೂಲದಿಂದಲೇ ಕಸ ವಿಂಗಡಿಸಿ

Cycle rally in shimogga
ಶಿವಮೊಗ್ಗದಲ್ಲಿ ಪರಿಸರ ದಸರಾ ಅಂಗವಾಗಿ ಸೈಕಲ್ ಜಾಥಾಗೆ ಪರಿಸರವಾದಿ ಪ್ರೊ.ಎಲ್.ಕೆ.ಶ್ರೀಪತಿ ಚಾಲನೆ ನೀಡಿದರು. ಎಂ.ಎಸ್.ಸಂತೋಷ್, ಎಸ್.ಎನ್.ಚನ್ನಬಸಪ್ಪ, ಪ್ರೊ. ಬಿ.ಎಂ.ಕುಮಾರಸ್ವಾಮಿ, ಗಿರೀಶ್ ಪಟೇಲ್, ತ್ರಿವೇಣಿ, ಜಿ.ವಿಜಯಕುಮಾರ್, ಪರಿಸರ ನಾಗರಾಜ್, ಸುರೇಶ್ ಕುಮಾರ್, ನರಸಿಂಹಮೂರ್ತಿ, ಅ.ನಾ.ವಿಜೇಂದ್ರ, ಶಿಲ್ಪಾ ಹೆಗಡೆ, ವಾಗೀಶ್ ಇದ್ದರು.
Published on

ಶಿವಮೊಗ್ಗ: ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಎಲ್ಲರೂ ಕೈಜೋಡಿಸಬೇಕು. ಕಸವನ್ನು ಮೂಲದಿಂದಲೇ ವಿಂಗಡಣೆ ಮಾಡಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಮಹಾನಗರ ಪಾಲಿಕೆ ಆವರಣದಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಬಳಸಬೇಕು ಎಂದು ನಾಗರಿಕರಲ್ಲಿ ವಿನಂತಿಸಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪರಿಸರಾಸಕ್ತರು, ಸ್ವಯಂ ಸೇವಾ ಸಂಘಟನೆಗಳ ಸದಸ್ಯರು ಹಾಗೂ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸೇರಿ ಅನೇಕರು ಸೈಕಲ್ ಜಾಥಾದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಪರಿಸರ ಸಂರಕ್ಷಣೆಯ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net