ಪ್ರತ್ಯೇಕ ಘಟನೆ, ಈಜಲು ಹೋಗಿದ್ದ ಬಾಲಕರಿಬ್ಬರ ಸಾವು

Death In Water 31 Dec 19
Published on

ನೇಸರಗಿ: ಸಮೀಪದ ಗಜಮಿನಾಳ ಗ್ರಾಮದಲ್ಲಿ ಶನಿವಾರ ಕೆರೆಗೆ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸಮೀಪದ ಹೊಸಕೋಟೆ ಗ್ರಾಮದ ನಿವಾಸಿ ಹರೀಶ ಮಲ್ಲಪ್ಪ ರಾಮಣ್ಣವರ (15) ಮೃತಪಟ್ಟ ಬಾಲಕ. ಶಾಲೆಗೆ ರಜೆ ಇರುವ ಕಾರಣ ಹರೀಶ ಅಜ್ಜಿಯ ಮನೆ ಗಜಮಿನಾಳಕ್ಕೆ ಹೋಗಿದ್ದ. ಈಜಲು ಬಾರದಿದ್ದರೂ ಗ್ರಾಮದ ಯುವಕರೊಂದಿಗೆ ಈಜಲು ಹೋಗಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ನೇಸರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಕ್ಕೇರಿ: ಪಟ್ಟಣದ ಹೊರ ವಲಯದ ಜಾಬಾಪುರದಲ್ಲಿ ಈಜಲು ಹೋಗಿದ್ದ ಬಾಲಕ ಆಯತಪ್ಪಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಕಾರ್ತಿಕ ಆನಂದ ಘಸ್ತಿ (15) ಮೃತ ಬಾಲಕ. ಬಾಲಕ ಮೇಲಿನಿಂದ ನೀರಿಗೆ ಧುಮುಕುವಾಗ ಕಲ್ಲಿಗೆ ತಲೆ ಬಡಿದು ಮೃತಪಟ್ಟಿದ್ದಾನೆ. ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್‌ಐ ಶಿವಾನಂದ ಗುಡಗನಟ್ಟಿ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net