ತಹಸೀಲ್ದಾರ್​, ಬಿಇಒಗೆ ಶಿಕ್ಷಕರ ಪ್ರತ್ಯೇಕ ಮನವಿ

Separate appeal of teachers to Tehsildar, BEO
ಬಸವನಬಾಗೇವಾಡಿಯಲ್ಲಿ ಪ್ರಾಥಮಿಕ ಶಾಲಾ ಶಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕು ಟಕದಿಂದ ತಹಸೀಲ್ದಾರ್​ ಯಮನಪ್ಪ ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಶಿವಾನಂದ ಮಂಗಾನವರ, ಬಿ.ಪಿ. ನಾಗಾವಿ, ಎಂ.ವಿ. ಗಬ್ಬೂರ, ಸಿ.ಬಿ. ಪಾಟೀಲ ಇತರರಿದ್ದರು.
Published on

ಬಸವನಬಾಗೇವಾಡಿ: ಪ್ರಾಥಮಿಕ ಶಾಲಾ ಶಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸೋಮವಾರ ತಹಸೀಲ್ದಾರ್​ ಯಮನಪ್ಪ ಸೋಮನಕಟ್ಟಿ ಹಾಗೂ ೇತ್ರಶಿಣಾಧಿಕಾರಿ ವಸಂತ ರಾಠೋಡ ಅವರಿಗೆ ಪ್ರತೇಕವಾಗಿ ಮನವಿ ಸಲ್ಲಿಸಲಾಯಿತು.

ಪಟ್ಟಣದ ಮಿನಿ ವಿಧಾನ ಸೌಧದ ತಹಸೀಲ್ದಾರ್​ ಕಚೇರಿ ಮುಂದೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ತಾಲೂಕು ಟಕದಿಂದ ಕೆಲಹೊತ್ತು ಪ್ರತಿಭಟನೆ ನಡೆಸಲಾಯಿತು.

ಸಂದ ತಾಲೂಕಾಧ್ಯ ಶಿವಾನಂದ ಮಂಗಾನವರ, ಶಿಕರ ಸಂದ ಅಧ್ಯ ಬಿ.ಪಿ. ನಾಗಾವಿ, ಎಂ.ವಿ. ಗಬ್ಬೂರ, ಸಿ.ಬಿ. ಪಾಟೀಲ ಮಾತನಾಡಿ, 2017 ರವರೆಗೆ ನೇಮಕವಾದ ಶಿಕರನ್ನು 1&7ನೇ ತರಗತಿಗೆ ನೇಮಕವಾದ ಶಿಕರೆಂದು ಪರಿಗಣಿಸಿ, ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು, 2017ರ ನಂತರ ನೇಮಕವಾದ ಶಿಕರಿಗೆ ಅನ್ವಯಿಸಬೇಕು.\

ಯಾವುದೇ ಕಾರಣಕ್ಕೂ 2016ಕ್ಕಿಂತ ಮೊದಲು ನೇಮಕವಾದವರಿಗೆ ಪೂರ್ವಾನ್ವಯಗೊಳಿಸಬಾರದು. ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ ಪದವೀಧರ ಶಿಕರೆಂದು ಕಾರ್ಯಾದೇಶ ಹೊರಡಿಸಬೇಕು. ಮೂಲತ 1&7/8 ತರಗತಿಗೆ ನೇಮಕ ಹೊಂದಿದವರನ್ನು ಪಿ.ಎಸ್​.ಟಿ ಎಂದು ಪದನಾಮ ಮಾಡಿ 1&5ಕ್ಕೆ ಸೀಮಿತಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ಹೇಳಿದರು.

ಅರ್ಹ ವಿದ್ಯಾರ್ಹತೆ ಪೂರೈಸಿದ 2016 ಕ್ಕಿಂತ ಮೊದಲು ನೇಮಕಾತಿಯಾದ ಎಲ್ಲ 1& 8ನೇ ತರಗತಿಗೆ ಪ್ರಾಥಮಿಕ ಶಾಲಾ ಶಿಕರ ಸಂಖ್ಯೆ ಮುಗಿಯುವವರೆಗೂ ಈ ಮೊದಲಿನಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು.

ಪ್ರಾಥಮಿಕ ಶಾಲಾ ಶಿಕರಿಗೆ ಈ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ಹೇಳಿದರು.

ಎಸ್​.ಎಂ. ಸಜ್ಜನ, ಜಿ.ಜಿ. ಮಸೂತಿ, ಪಿ.ಬಿ. ಕಡಕೋಳ, ಎಂ.ಆರ್​. ರಾಜನಾಳ, ಕೆ.ಬಿ. ಪದರಾ, ಎಂ.ಎಚ್​. ಸವಣೂರ, ಎಸ್​.ಬಿ. ಚಿಕ್ಕರೆಡ್ಡಿ, ಎಸ್​.ಎಸ್​. ಇಂಗಳೇಶ್ವರ, ಎ.ಎಚ್​. ನಾಡಗೌಡ, ಎಚ್​.ಬಿ ಬಾರಿಕಾಯಿ, ಚಿದಾನಂದ ಹೂಗಾರ, ಜಿ.ಡಿ. ಪಾಟೀಲ, ಎಂ.ಎಸ್​. ಮುರಾಳ, ಐ.ಎಂ. ಅಳ್ಳಗಿ, ಸಿದ್ದು ಉಕ್ಕಲಿ, ಪಿ.ಎಸ್​. ಬಾಗೇವಾಡಿ, ವಿ.ಬಿ. ಶೇಖಣ್ಣಿ, ಎಚ್​.ಎಚ್​. ಭಜಂತ್ರಿ, ಆರ್​.ಡಿ. ಪವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net