ಅಡುಗೆ ಅನಿಲ 'ಇ-ಕೆವೈಸಿ' ಅಪ್ಡೇಟ್​ಗೆ ಸೆ.30 ಕೊನೆಯ ದಿನ

Gas
Published on

ಉಡುಪಿಯ ಎಚ್​ಪಿ ಗ್ಯಾಸ್​ ಗ್ರಾಹಕರಿಗೆ ಸೂಚನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಎಚ್​ಪಿ ಗ್ಯಾಸ್​ನ ಅಡುಗೆ ಅನಿಲದ ಅನೇಕ ಗ್ರಾಹಕರು ಇದುವರೆಗೂ ತಮ್ಮ ಏಜೆಂಟರಲ್ಲಿ ಇ-ಕೆವೈಸಿ ನೋಂದಣಿ ಮಾಡಿಕೊಂಡಿಲ್ಲ. ಬಾಕಿ ಉಳಿದಿರುವ ಗ್ರಾಹಕರು ಕೂಡಲೇ ಆಧಾರ್​ ಕಾರ್ಡ್​ ಹಾಗೂ ಗ್ಯಾಸ್​ ಪಾಸ್​ಬುಕ್​ನೊಂದಿಗೆ ಸೆ.30ರ ಒಳಗೆ ಖುದ್ದು ಆಗಮಿಸಿ ಇ-ಕೆವೈಸಿ ಅಪ್ಡೇಟ್​ ಮಾಡುವಂತೆ ಸೂಚಿಸಲಾಗಿದೆ.

Gas
ಈ ಹಿಂದೆ ಇ-ಕೆವೈಸಿ ಮಾಡಿದರೆ ಮಾತ್ರ ಸಬ್ಸಿಡಿ ಸಿಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಬಹಳ ಜನರು ಆತುರದಿಂದ ಇ-ಕೆವೈಸಿ ಅಪ್ಡೇಟ್​ ಮಾಡಿಸಿಕೊಂಡಿದ್ದಾರೆ. ಬಳಿಕ ಅದು ಸುಳ್ಳು ಎಂದು ತಿಳಿದ ಬಳಿಕ ಅನೇಕರು ಅಪ್ಡೇಟ್​ ಮಾಡಿಸಿಲ್ಲ. ಗ್ಯಾಸ್​ ಗ್ರಾಹಕರು ಸೆ.30ರ ಒಳಗೆ ತಮ್ಮ ಇ-ಕೆವೈಸಿ ಅಪ್ಡೇಟ್​ ಮಾಡುವುದು ಕಡ್ಡಾಯವಾಗಿದೆ. ಗ್ರಾಹಕರಿಗೆ ಗ್ಯಾಸ್​ ಬುಕ್​ ಮಾಡುವಾಗ ಇ-ಕೆವೈಸಿ ಅಪ್ಡೇಟ್​ ಮಾಡುವಂತೆ ಧ್ವನಿ ಮುದ್ರಿತ ಸಂದೇಶವೂ ಬರುತ್ತಿದೆ.

ಈ ಕಾರ್ಯ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ಯಾಸ್​ ಬುಕ್​ ಆಗದೆಯೂ ಇರಬಹುದು. ಆ ಸಮಸ್ಯೆ ಎದುರಾಗುವ ಮೊದಲೇ ತಮ್ಮ ಇ-ಕೆವೈಸಿ ಅಪ್ಡೇಟ್​ ಮಾಡಿಕೊಳ್ಳುವುದು. ಮಾಹಿತಿಗಾಗಿ ದೂ.ಸಂ. 0820-2524693 ಅಥವಾ ಉಡುಪಿ ಸಿಟಿ ಬಸ್​ ನಿಲ್ದಾಣ ಸಮೀಪದಲ್ಲಿರುವ ರಾಘವೇಂದ್ರ ಆಚಾರ್ಯ ಎಚ್​ಪಿ ಗ್ಯಾಸ್​ನ ಕಚೇರಿಗೆ ಭೇಟಿ ನೀಡುವಂತೆ ಗ್ಯಾಸ್​ ವಿತರಕರಾದ ವಿಷ್ಣು ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net