

ಮಡಿಕೇರಿ: ಪ್ರಸಕ್ತ(೨೦೨೩-೨೪) ಸಾಲಿನಲ್ಲಿ ಪುರು?ರು ಹಾಗೂ ಮಹಿಳೆಯರಿಗೆ ಜಿಲ್ಲೆಯ ಐದು ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆ ಇಲಾಖಾ ವತಿಯಿಂದ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾಕೂಟಗಳಲ್ಲಿ ಜಿಲ್ಲೆಯ ಆಯಾಯ ತಾಲೂಕಿನ ಕ್ರೀಡಾಪಟುಗಳು ಭಾಗವಹಿಸಬಹುದು. ಸೆ.೧೧ ರಂದು ಮಡಿಕೇರಿ ತಾಲೂಕು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಸೆ.೧೨ ಕುಶಾಲನಗರ ತಾಲೂಕು ಕೂಡಿಗೆ ಕ್ರೀಡಾಶಾಲೆ ಮೈದಾನ, ಸೆ.೧೩ ಸೋಮವಾರಪೇಟೆ ತಾಲೂಕಿಗೆ ಕೂಡಿಗೆ ಕ್ರೀಡಾಶಾಲೆ ಮೈದಾನ, ಸೆ.೧೪ ರಂದು ಪೊನ್ನಂಪೇಟೆ ತಾಲೂಕಿಗೆ ಮತ್ತು ಸೆ.೧೫ ವಿರಾಜಪೇಟೆ ತಾಲೂಕಿಗೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಹಾಗೂ ಜೂನಿಯರ್ ಕಾಲೇಜ್ ಆಟದ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದೆ. ಜಿಲ್ಲೆಯ ಆಸಕ್ತ ಪುರು? ಹಾಗೂ ಮಹಿಳಾ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ದಸರಾ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ ದೂ.ಸಂ.ಮಡಿಕೇರಿ ತಾಲೂಕು ಮಹಾಬಲ ೯೯೮೦೮೮೭೪೯೯, ಹಾಗೂ ಮನು ೯೪೮೦೦೩೨೭೧೨, ಸೋಮವಾರಪೇಟೆ ತಾಲೂಕು ವೆಂಕಟೇಶ್ ೯೮೪೪೩೨೬೦೦೭ ಕುಶಾಲನಗರ ತಾಲೂಕು, ಮಂಜುನಾಥ್ ೯೩೪೨೫೬೩೦೧೪, ಪೊನ್ನಂಪೇಟೆ ಸುಬ್ಬಯ್ಯ ೮೧೯೭೭೯೦೩೫೦, ವಿರಾಜಪೇಟೆ ತಾಲೂಕು ಗಣಪತಿ ೮೯೫೧೨೮೭೩೦೧ ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಆಯಾಯ ತಾಲೂಕಿನ ಕ್ರೀಡಾಪಟುಗಳು ತಮ್ಮ ತಾಲೂಕಿನ ಕ್ರೀಡಾಕೂಟದಲ್ಲಿ ಮಾತ್ರ ಭಾಗವಹಿಸಬೇಕು. ಒಂದು ತಾಲೂಕಿನಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಮತ್ತೊಂದು ತಾಲೂಕಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ. ಬೆಳಗ್ಗೆ ೯:೩೦ರ ಒಳಗೆ ಕಡ್ಡಾಯವಾಗಿ ಸ್ಥಳದಲ್ಲಿ ನೋಂದಾಯಿಸಿಕೊಳ್ಳತಕ್ಕದ್ದು. ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ ಎಂದು ವಿ.ಟಿ.ವಿಸ್ಮಯಿ ತಿಳಿಸಿದ್ದಾರೆ.