ದೊಡ್ಡಪ್ಪನ್ನು ಹತ್ಯೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ

imagessssssss
Published on

ಚಿತ್ರದುರ್ಗ: ಜಮೀನು ಪಾಲು ಕೊಡುತ್ತಿಲ್ಲವೆಂಬ ಧ್ವೇಷಕ್ಕೆ ತನ್ನ ದೊಡ್ಡಪ್ಪನನ್ನು ಮಾರಾಕಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದ ಅಪರಾಧಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ. ಹೊಸದುರ್ಗ ತಾಲೂಕು ಆದ್ರಿಕಟ್ಟೆಯ ಅಪರಾಧಿ ಲೋಹಿತ,ತನ್ನ ದೊಡ್ಡಪ್ಪ ನಾಗಪ್ಪನ್ನು 2018 ಅಕ್ಟೋಬರ್ 8ರಂದು ಹಲ್ಲೆ ನಡೆಸಿ ಹತ್ಯೆಗೈದು,ಗ್ರಾಮದ ಕುಮಾರ ಎಂಬಾತನ ಮೇಲೂ ಹಲ್ಲೆ ಮಾಡಿದ್ದ.

ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಹೊಸದುರ್ಗ ಸಿಪಿಐ ಎಲ್.ರುದ್ರಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿ ಚಾರಣೆ ನಡೆಸಿದ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಲೋಹಿತಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಎನ್.ಎಸ್.ಮಲ್ಲಯ್ಯ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net