ಹಿರಿಯ ನಾಗರಿಕರ ಪಿಂಚಣಿ ಕುರಿತು ಚರ್ಚೆ

Published on

ಹುಬ್ಬಳ್ಳಿ: ರಾಷ್ಟ್ರೀಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನ ಮತ್ತು ರಾಷ್ಟ್ರೀಯ ಅರ್ಥಕ್ರಾಂತಿ ಟ್ರಸ್ಟ್ ಸಹಯೋಗದಲ್ಲಿ ಆರ್ಥಿಕವಾಗಿ ದುರ್ಬಲರಾದ ಹಿರಿಯ ನಾಗರಿಕರಿಗೆ ಮಾಸಿಕ 10ಸಾವಿರ ರೂ. ಪಿಂಚಣಿ ನೀಡುವುದು ಮತ್ತು ಹಿರಿಯರನ್ನು ರಾಷ್ಟ್ರದ ಸಂಪತ್ತು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡುವ ಕುರಿತು ರಾಜ್ಯಸಭಾ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಹಿರಿಯ ನಾಗರಿಕರು ಮತ್ತು ನಿವತ್ತ ನೌಕರರ ಕ್ಷೇಮಾಭಿವದ್ಧಿ ಸಂದ ಪದಾಧಿಕಾರಿಗಳು ಭೇಟಿ ಮಾಡಿ ಚರ್ಚೆ ನಡೆಸಿದರು.

ರಾಷ್ಟ್ರ ವ್ಯಾಪ್ತಿ ಹಿರಿಯ ನಾಗರಿಕರ ಜೀವನ ಗೌರವ ಅಂದೋಲನ ಕುರಿತು ಸಂಪೂರ್ಣ ಮಾಹಿತಿ ಪಡೆದ ಡಾ. ಹೆಗ್ಗಡೆ ಅವರು, ಈ ವಿಷಯವನ್ನು ಸಂಬಂಧಪಟ್ಟ ಕೇಂದ್ರ ಸಚಿವರ ಜತೆ ಚಚಿರ್ಸುವ ಭರವಸೆಯನ್ನು ನೀಡಿದರು.

ಸಂಘದ ಅಧ್ಯಕ್ಷ ಬಿ.ಎ. ಪಾಟೀಲ, ಉಪಾಧ್ಯಕ್ಷ ಧರಣೇಂದ್ರ ಜವಳಿ, ಕೃಷಿ ಸಮಿತಿ ಅಧ್ಯಕ್ಷ ಡಿ.ಟಿ. ಪಾಟೀಲ, ಮಹಿಳಾ ಸಮಿತಿಯ ಸುನಂದಾ ಬೆನ್ನೂರ, ಪದಾಧಿಕಾರಿಗಳಾದ ಅಶೋಕ ಚಂದಾವರಕರ, ಅನಿಲ ದಂಡಿನ, ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net