ಹಿರಿಯರಿಗೆ ಬೇಕು ಮನೋರಂಜನೆ

hiriyarottige
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಇಂದಿನ ಕಾಲಮಾನದಲ್ಲಿ ವೃದ್ಧಾಪ್ಯವೇ ಜಿಗುಪ್ಸೆಯಾಗಿರುವುದರಿಂದ ಅನೇಕರು ಮನೋರಂಜನೆಯಿಂದ ವಂಚಿತರಾಗಿದ್ದಾರೆ. ಹಿರಿಯರಿಗೆಂದೇ ಇಂತಹ ಕಾರ‌್ಯಕ್ರಮಗಳನ್ನು ಆಯೋಜಿಸುತ್ತಿರುವ ಈ ಸಮಿತಿಯ ಕಾರ್ಯ ಶ್ಲಾಘನಾರ್ಹ ಎಂದು ಪೆರ್ಡೂರು ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಗೌರವಾಧ್ಯಕ್ಷ ಶಾಂತಾರಾಮ ಸೂಡ ಹೇಳಿದರು.

ಸಮಿತಿ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ಹಿರಿಯೆರೊಟ್ಟಿಗೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಜೆ ನಡೆದ ಸಮಾರೋಪದಲ್ಲಿ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಕೋಟ್ಯಾನ್ ಶುಭಹಾರೈಸಿದರು. ಕಲಾವಿದ ಪಿ.ಎನ್. ಆಚಾರ್ಯ ಪ್ರಾತ್ಯಕ್ಷಿಕೆ ನೀಡಿ, ಥ್ರೆಡ್ ಆರ್ಟ್ ಮತ್ತು ಪ್ರಕೃತಿ ಚಿತ್ರಗಳನ್ನ ರಚಿಸಿ ಸಭಿಕರನ್ನು ಮನರಂಜಿಸಿದರು. ಉಪಾಧ್ಯಕ್ಷ ಪಳಜೆ ಪ್ರಮೋದ್ ರೈ, ಕಾರ್ಯದರ್ಶಿ ರವೀಂದ್ರ ನಾಡಿಗ್ ಉಪಸ್ಥಿತರಿದ್ದರು. ಪ್ರಭಾಕರ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಗೌರವಾರ್ಪಣೆ

ಸೂಲಗಿತ್ತಿಯಾಗಿ 37 ವರ್ಷ ಸೇವೆ ಸಲ್ಲಿಸಿರುವ ಕಿರಿಯ ಆರೋಗ್ಯ ಸಹಾಯಕಿ ನಳಿನಿ, ಕಲಾವಿದ ಸುಧಾಕರ ದೇವಾಡಿಗ, ಚಿನ್ನದ ಪದಕಕ್ಕೆ ಭಾಜನರಾದ ಮಂಡ್ಯ ಅಗ್ನಿಶಾಮಕ ಠಾಣೆಯ ಅಧಿಕಾರಿ ಪೆರ್ಡೂರು ಬುಕ್ಕಿಗುಡ್ಡೆ ಪ್ರಭಾಕರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net