ಕಾರಂತ ಪುರಸ್ಕಾರಕ್ಕೆ ಸಾಹಿತಿ ಎಚ್​.ಶಕುಂತಲಾ ಭಟ್​ ಆಯ್ಕೆ

Shakunthala
Published on

ವಿಜಯವಾಣಿ ಸುದ್ದಿಜಾಲ ಉಡುಪಿ

ಡಾ. ಕೋಟ ಶಿವರಾಮ ಕಾರಂತ ಅವರ ಜನ್ಮದಿನದ ನಿಮಿತ್ತ ಗೆಳೆಯರ ಬಳಗ (ರಿ.)ಕಾರ್ಕಡ, ಸಾಲಿಗ್ರಾಮದ ವತಿಯಿಂದ ಪ್ರತಿವರ್ಷ ನೀಡುವ ಗೆಳೆಯರ ಬಳಗ ಕಾರಂತ ಪುರಸ್ಕಾರ-2025ರ ಪ್ರಶಸ್ತಿಗೆ ಹಿರಿಯ ಸಾಹಿತಿ, ಕಾರಂತರ ಹಿತೈಷಿಯಾಗಿದ್ದ ಎಚ್​.ಶಕುಂತಲಾ ಭಟ್​ ಆಯ್ಕೆಯಾಗಿದ್ದಾರೆ.

ಸಮಾಜ ಸೇವಕಿ, ಖ್ಯಾತ ಲೇಖಕಿ, ಸಂಘಟಕಿ, ಕವಿ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಿಂತಕಿ, ಕಥೆಗಾರರೂ ಆಗಿದ್ದು ಕನ್ನಡ ಹಾಗೂ ತುಳು ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಸುಮಾರು 90 ಕೃತಿಗಳು ಪ್ರಕಟಗೊಂಡಿವೆ.

ಪುರಸ್ಕಾರವು ಗೌರವಧನ ಹಾಗೂ ಸನ್ಮಾನ ಪತ್ರ, ಫಲ-ಪುಷ್ಪ ಹೊಂದಿದೆ. ಅ.17ರಂದು ಸಂಜೆ ಕಾರ್ಕಡದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಅನೇಕ ಗಣ್ಯರು ಪಾಲ್ಗೊಳ್ಳಿದ್ದಾರೆ ಎಂದು ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net