ಹಿರಿಯ ಪತ್ರಕರ್ತರು ಕಿರಿಯರಿಗೆ ಮಾದರಿ ಆಗಲಿ

Senior journalists should be role models for younger ones
ಲೋಕಾಪುರ ಪಟ್ಟಣದಲ್ಲಿ ಪತ್ರಕರ್ತರ ದಿನಾಚರಣೆ ನಿಮಿತ್ತ ಎಲ್ಲ ಪತ್ರಕರ್ತರನ್ನು ಮುಖಂಡರು ಸನ್ಮಾನಿಸಿದರು. ಪ್ರಕಾಶ ಚುಳಕಿ, ಅರುಣ ನರಗುಂದ, ಮಹೇಶ ಹುಗ್ಗಿ, ಗೋವಿಂದ ಕೌಲಗಿ, ಲಕ್ಷ್ಮಣ ಮಾಲಗಿ ಇತರರಿದ್ದರು.
Published on

ಲೋಕಾಪುರ: ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದ್ದು, ಅವರಿಗೆ ಹೊಣೆಗಾರಿಕೆ ದೊಡ್ಡದಿದೆ. ಹಿರಿಯ ಪತ್ರಕರ್ತರು ಕಿರಿಯರಿಗೆ ಮಾದರಿಯಾಗಬೇಕು ಎಂದು ಲೋಕಾಪುರ ಬಸವೇಶ್ವರ ಪತ್ತಿನ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಪ್ರಕಾಶ ಚುಳಕಿ ಹೇಳಿದರು.

ಪಟ್ಟಣದ ಲೋಕೋಪಯೋಗಿ ವಸತಿ ಇಲಾಖೆ ವಸತಿ ಗೃಹದಲ್ಲಿ ಪತ್ರಿಕಾ ದಿನಾಚರಣೆ ನಿಮಿತ್ತ ಪತ್ರಕರ್ತರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪತ್ರಿಕಾ ರಂಗಕ್ಕೆ ಪ್ರವೇಶಿಸುವವರು ಧೈರ್ಯ ಮತ್ತು ಸತ್ಯಕ್ಕೆ ನಿಷ್ಠರಾಗಿ ನಡೆಯಬೇಕು. ತಮ್ಮ ಸ್ಥಾನಮಾನಕ್ಕೆ ಧಕ್ಕೆ ಬಾರದಂತೆ ಪತ್ರಕರ್ತರು ಕಾರ್ಯನಿರ್ವಹಿಸಬೇಕು. ಪತ್ರಕರ್ತರಿಗೆ ಅಭದ್ರತೆ ಭಾವ ಮೂಡಿದರೆ ಅವರಿಂದ ಸಮರ್ಪಕ ಕೆಲಸ ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದರು.

ಕೆಎಂಎ್ ನಿರ್ದೇಶಕ ಲಕ್ಷ್ಮಣ ಮಾಲಗಿ ಮಾತನಾಡಿ, ಜನರು ಮಾಧ್ಯಮ, ಪತ್ರಕರ್ತರನ್ನು ಗಮನಿಸುತ್ತಿರುತ್ತಾರೆ. ಜನರು ಪತ್ರಕರ್ತರ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ವಾಲ್ಮೀಕಿ ಸಮಾಜದ ಮುಖಂಡ ಮಾತನಾಡಿ, ದೇಹದ ರೋಗಕ್ಕೆ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸಿದಂತೆ ಸಮಾಜದ ಕಾಯಿಲೆಗೆ ಪತ್ರಕರ್ತರು ಚಿಕಿತ್ಸಕರಾಗಿ ಕೆಲಸ ಮಾಡಬೇಕಿದೆ ಎಂದರು.

ಮಹೇಶ ಹುಗ್ಗಿ, ಅರುಣ ನರಗುಂದ, ರಂಗನಾಥ ಚಿಪ್ಪಲಕಟ್ಟಿ, ಗುತ್ತಿಗೆದಾರ ಶಿವನಗೌಡ ಪಾಟೀಲ, ಭೀಮಶಿ ಅವರಾದಿ, ಭುಜಂಗ ಉಪ್ಪಾರ, ಪತ್ರಕರ್ತರಾದ ಬಂದೇನವಾಜ್ ರಾಮದುರ್ಗ, ಶ್ರೀನಿವಾಸ ಬಬಲಾದಿ, ಹಸನಡೊಂಗ್ರಿ ಮಹಾಲಿಂಗಪುರ, ಈರಣ್ಣ ಸಾಳಗುಂದಿ, ಸಿದ್ದು ಹೂಗಾರ, ಸಲೀಂ ಕೊಪ್ಪದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net