ಶಿಕ್ಷಣ ತಜ್ಞ, ಹಿರಿಯ ಪತ್ರಕರ್ತ ದಾಮೋದರ್ ಐತಾಳ್ ನಿಧನ

death
Published on

ಉಡುಪಿ: ಶಿಕ್ಷಣ ತಜ್ಞ, ಹಿರಿಯ ಪತ್ರಕರ್ತ, ಬಳಕೆದಾರರ ವೇದಿಕೆ ಮಾಜಿ ಸಂಚಾಲಕ ಕೆ.ದಾಮೋದರ್ ಐತಾಳ್ (85) ಅವರು ಮಂಗಳವಾರ ಬೆಳಿಗ್ಗೆ ವಯೋಸಹಜ ಅನಾರೋಗ್ಯದಿಂದ ಕಡಿಯಾಳಿಯಲ್ಲಿರುವ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ.

ಕಡಿಯಾಳಿ ನಿವಾಸಿಯಾದ ದಾಮೋದರ್ ಐತಾಳ್ ಅವರು ಕನ್ನಡ ಪಂಡಿತರಾಗಿ ವಿವಿಧ ಕ್ಷೇತ್ರಗಳಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಪತ್ರಿಕಾ ವರದಿಗಾರನಾಗಿ, ಉಡುಪಿ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಮಂಗಳೂರು ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ವಿಷಯ ಪರಿವೀಕ್ಷಣಾ ಅಧಿಕಾರಿಯಾಗಿದ್ದ ಐತಾಳರು, ಉಡುಪಿ ಶಿಕ್ಷಕರ ಸಹಕಾರಿ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ದಾಮೋದರ್ ಐತಾಳ್ ಅವರು ಉಡುಪಿ ಕೃಷ್ಣ ಮಠದ ಚಿನ್ನರ ಸಂತರ್ಪಣೆ ಯೋಜನೆ ಆರಂಭದಲ್ಲಿ ಸ್ಫೂರ್ತಿದಾಯಕರಾಗಿದ್ದರು. ಮೃತರು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net