ಜಿಲ್ಲಾಧಿಕಾರಿ ವಿಶ್ವಾಸಾದರವನ್ನೆಂದು ಮರೆಯಲಾರೆ: ಮೆಚ್ಚುಗೆ ಪತ್ರ ಬರೆದ ಹಿರಿಯ ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ

Go ru channabasappa
Published on

ಮಂಡ್ಯ: ಎಂಬತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾಡಳಿತ ತೋರಿದ ವಿಶ್ವಾಸಾದರವನ್ನು ಮೆಚ್ಚಿಕೊಂಡು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಸಮ್ಮೇಳನಾಧ್ಯಕ್ಷರೂ ಆದ ಹಿರಿಯ ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಪತ್ರ ಬರೆದಿದ್ದಾರೆ.

ತನ್ನ ಅನುಭವದಲ್ಲಿ ಜಿಲ್ಲಾಧಿಕಾರಿಯೊಬ್ಬರು ಸಾಹಿತ್ಯ ಸಮ್ಮೇಳನದ ವ್ಯವಸ್ಥೆಯಲ್ಲಿ ಇಷ್ಟು ಶ್ರಮ ವಹಿಸಿದ್ದುದನ್ನು ಕಂಡಿದ್ದು ಇದೇ ಮೊದಲು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಡಿಸಿ ಅವರಿಗಿರುವ ಶ್ರದ್ಧಾಸಕ್ತಿ ನಿಜಕ್ಕೂ ಅಭಿನಂದನೀಯ. ಸಮ್ಮೇಳನದ ಸಲುವಾಗಿ ಮಂಡ್ಯದಲ್ಲಿದ್ದ ನಾಲ್ಕು ದಿನವೂ ತೋರಿದ ವಿಶ್ವಾಸಾದರವನ್ನು ಮರೆಯಲಾರೆ. ಡಿಸಿ ಅವರು ನೀಡಿದ ಸತ್ಕಾರಕ್ಕೆ ಕೃತಜ್ಞನಾಗಿದ್ದೇನೆ. ಮಂಡ್ಯದಲ್ಲಿ ನಡೆದ ಸಮ್ಮೇಳನ ಸಾಹಿತ್ಯಸಾಕ್ತರ ಪಾಲುದಾರಿಕೆಯಲ್ಲಿ ಒಂದು ದಾಖಲೆಯನ್ನೇ ಸ್ಥಾಪಿಸಿತೆಂದು ಹೇಳಲು ಹರ್ಷವೆನಿಸುತ್ತದೆ. ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳಿಗೆ ಸಾಹಿತ್ಯ ಸಂಬಂಧವಿರುವುದಿಲ್ಲ ಎಂಬ ಮಾತನ್ನು ಹುಸಿಗೊಳಿಸಿ, ಸಮ್ಮೇಳನದ ಯಶಸ್ಸಿಗಾಗಿ ಶ್ರಮಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net